ಶಿರಮಗೊಂಡನಹಳ್ಳಿ- ನಾಗನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೩ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರಮಗೊಂಡನಹಳ್ಳಿ‌ಯಲ್ಲಿ  ಅದ್ದೂರಿ ಪ್ರಚಾರ ನಡೆಸಿದರು.ಗ್ರಾಮದ ಆಂಜನೇಯ ದೇವರ ದರ್ಶನ ಪಡೆದು ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಎ ರವೀಂದ್ರನಾಥ್ ಮಾಜಿ ದೂಡಾ ಅಧ್ಯಕ್ಷ ಯಶವಂತರಾವ್ ಜಾಧವ್,ಬಿಜೆಪಿ ಯುವ ಮುಖಂಡ ಬಿ‌.ಜಿ.ಅಜಯ್ ಕುಮಾರ್ , ಓಬಿಸಿ ಮೋರ್ಚಾ ರಾಜ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, , ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಶ್ರೀನಿವಾಸ ಮಂಡಲದ ಅಧ್ಯಕ್ಷ ಆನಂದ ರಾವ್ ಸಿಂದೆ, ವೆಂಕಟೇಶ, ನೀಲಗುಂದ ರಾಜು,ಗುರುಪ್ರಾಸದ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ್,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಮ್ಮ, ನೀಲಮ್ಮ,ಮಹಾನಗರ ಪಾಲಿಕೆಯ ಸದಸ್ಯರು, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಮುಖಂಡರು ಸೇರಿದಂತೆ ಇತರರಿದ್ದರು.ಬಳಿಕ ಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನೂರು ಗ್ರಾಮದಲ್ಲಿ  ಅದ್ದೂರಿ ಪ್ರಚಾರ ನಡೆಸಿದರು.