ಶಾಸನ ಶಾಮನೂರು ಮಹಿಳೆಯರ ಕುರಿತ ಹೇಳಿಕೆಗೆ ಖಂಡನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೬; ಮಹಿಳೆಯರು ಅಡುಗೆಗೆ ಲಾಯಕ್ಕು ಎಂದು  ಹೇಳಿಕೆ ನೀಡುವ ಮೂಲಕ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಇಡೀ ಮಹಿಳಾ ಸಮುದಾಯವನ್ನೇ ಅವಮಾನಿಸಿದ್ದಾರೆ. ಯಾರೇ ಆಗಲಿ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದುನಾವು ಭಾರತೀಯರು ಸಂಘಟನೆ ಸಂಚಾಲಕಿ ಟಿ. ಜಬೀನ ಆಪಾ ಹೇಳಿದ್ದಾರೆ.ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಿದರೆ ಎಲ್ಲರೂ ಊಟ ಮಾಡಲು ಸಾಧ್ಯ. ಇದನ್ನು ‌ಅವರು ಅರಿತು ಮಾತನಾಡಬೇಕು. ಶಾಸಕರು ಹಿರಿಯ ವಯಸ್ಸಿನಲ್ಲಿ ಈ ರೀತಿ ಪದ ಬಳಕೆ ಮಾಡಬಾರದು ಬರುವ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.30 ರಷ್ಟು ಮೀಸಲಾತಿ ಸೌಲಭ್ಯ ಸಿಗಲಿದ್ದು, ಎಲ್ಲ ರಾಜಕೀಯ ಪಕ್ಷಗಳು ಮಹಿಳ  ಅಭ್ಯರ್ಥಿಗಳಿಗೆ ಅವಲಂಬಿತವಾಗಬೇಕಾಗಿದೆ ಎಂದಿದ್ದಾರೆ.ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹಿಜಾಬ್ ವಿಷಯ ಕುರಿತು ಮುಸ್ಲಿಂ ವಿದ್ಯಾರ್ಥಿನಿಯರಿಗೆ ತೋಂದರೆ ಕೂಡಲಯಿತು ಅದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ನವರು ಮಹಿಳಾ ವಿರೋಧಿ ಹೇಳಿಕ್ಕೆ ಗೆ ಕ್ಷಮೆ ಕೇಳದೆ ಇದ್ದರೆ ಅವರು ಕೂಡ ಸೋಲು ಅನುಭವಿಸ ಬೇಕಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.ತಕ್ಷಣ ದೇಶದ ಮಹಿಳೆಯರಲ್ಲಿ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನಮನವರು ಕ್ಷಮೆ ಕೇಳಬೇಕು ಎಂದು ಒತ್ತಾಯಸಿದ್ದಾರೆ.