ಪ್ಯಾಲೆಸ್ಟೈನ್ ಧ್ವಜ ಹಿಡಿದಿದ್ರೆ ತಪ್ಪಲ್ಲ : ಸಚಿವ ಜಮೀರ್ ಅಹ್ಮದ್
ಕಲಬುರಗಿ,ಸೆ 19: ಪ್ಯಾಲೆಸ್ಟೈನ್ ಧ್ವಜ ಹಿಡಿದಿದ್ದರೆ ತಪ್ಪೇನು ಇಲ್ಲ ಅನ್ನಿಸುತ್ತದೆ ಎಂದು ಅಲ್ಪಸಂಖ್ಯಾತ ಕಲ್ಯಾಣ,ವಕ್ಫ್ ಹಾಗೂ ವಸತಿ ಖಾತೆ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಪ್ಯಾಲೆಸ್ಟೈನ್ ಧ್ವಜ ಮೆರೆವಣಿಗೆ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ಯಾಲೆಸ್ಟೈನ್ ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ.ಕೇಂದ್ರವೇ ವಿ ಆರ್ ವಿತ್ ಪ್ಯಾಲೆಸ್ಟೈನ್ ಅಂದಿದೆ.ಕೇಂದ್ರ ಸರ್ಕಾರ ಹೇಳಿದ ಮೇಲೇ ತಾನೇ ಯಾರೋ ಧ್ವಜ ಹಿಡಿದಿದ್ದು ಎಂದರು.
ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು.ಘೋಷಣೆ ಕೂಗಿದರೆ ಅಂತವರು ದೇಶದ್ರೋಹಿಗಳು.ಅವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು.ನಾನು ಮೊದಲು ಹಿಂದೂಸ್ತಾನಿ,ಕನ್ನಡಿಗ. ಆಮೇಲೆ ಮುಸ್ಲಿಂ ಎಂದರು.