ಕಲ್ಲಬೇನೂರ: ಮನೆ ಬೀಗ ಮುರಿದು 1.29 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು
ಕಲಬುರಗಿ,ಸೆ.19-ಮನೆ ಬೀಗ ಮುರಿದು 1.29 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಬೇನೂರ ಗ್ರಾಮದಲ್ಲಿ ನಡೆದಿದೆ.
ನಾಗಪ್ಪಾ ಮಾಣಿಕ ಪೂಜಾರಿ (42) ಎಂಬುವವರ ಮನೆಯೇ ಕಳವಾಗಿದ್ದು, ಇವರು ಮನೆಗೆ ಬೀಗ ಹಾಕಿಕೊಂಡು ಹೊಲಕ್ಕೆ ಹೋದ ವೇಳೆ ಕಳ್ಳರು ಮನೆ ಬೀಗ ಮುರಿದು ಅಲಮಾರಿಯಲ್ಲಿಟ್ಟಿದ್ದ 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬೋರಮಳ, 40 ಸಾವಿರ ರೂ.ಮೌಲ್ಯದ 10 ಗ್ರಾಂ. ಬಂಗಾರದ ಬೆರಳುಂಗುರ, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ, 3 ಸಾವಿರ ರೂ.ಮೌಲ್ಯದ 60 ಗ್ರಾಂ.ಬಂಗಾರದ ಬೆಳ್ಳಿ ಕಾಲು ಜೈನ, 6 ಸಾವಿರ ರೂ.ನಗದು ಸೇರಿ 1.29 ಲಕ್ಷ ರೂ.ಮೌಲ್ಯದ ನಗನಾಗಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.