ಏ. 6 ಹಾಗೂ 7 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಏ.04: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ ಕುರಿಕೋಟಾದಲ್ಲಿರುವ ಜಾಕ್‍ವೆಲ್ ಹತ್ತಿರ 600 ಎಂ.ಎಂ. ವ್ಯಾಸದ ಎಮ್‍ಎಸ್ ಪೈಪ್‍ಲೈನ್ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇದರ ದುರಸ್ತಿ ಕಾರ್ಯ ಕೈಗೊಂಡಿರುವ ಪ್ರಯುಕ್ತ ಇದೇ ಏಪ್ರಿಲ್ 6 ಹಾಗೂ 7 ರಂದು ಈ ಕೆಳಕಂಡ ಮೇಲ್ಮಟ/ಕೆಳಮಟ್ಟದ ಜಲಸಂಗ್ರಹಗಾರಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ, ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಮೋಮಿನಪುರ, ಮೇಲ್ಮಟ ಜಲಸಂಗ್ರಹಗಾರ, ಸೂಪರ್ ಮಾರ್ಕೇಟ್, ಹಳೇ ಎಸ್.ಪಿ ಆಫೀಸ್, ಮೇಲ್ಮಟ ಜಲಸಂಗ್ರಾಹಗಾರ, ಹಳೇ ಡಿ.ಸಿ ಆಫೀಸ್, ಮೇಲ್ಮಟ ಜಲಸಂಗ್ರಾಹಗಾರ, ಪೊಲೀಸ್ ಕ್ವಾರ್ಟರ್ಸ್ , ಮೇಲ್ಮಟ ಜಲಸಂಗ್ರಾಹಗಾರ, ಐವಾನ್ ಶಾಹಿ, ಮೇಲ್ಮಟ ಜಲಸಂಗ್ರಹಗಾರ, ಸಾಯಿನಗರ, ಮೇಲ್ಮಟ ಜಲಸಂಗ್ರಹಗಾರ, ಪಶುಸಂಗೋಪನಾ ಆಸ್ಪತ್ರೆ, ಮೇಲ್ಮಟ ಜಲಸಂಗ್ರಹಗಾರ ಹಾಗೂ ಜಿಮ್ಸ್ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆ, ಶಹಬಾಜಾರ ಮೇಲ್ಮಟ ಜಲಸಂಗ್ರಹಗಾರ ಹಾಗೂ ಡೆಮೋ ಜೋನ್‍ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಲಬುರಗಿ ನಗರದ ಸಾರ್ವಜನಿಕರು ಮಹಾನಗರಪಾಲಿಕೆ, ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.