ದಾಖಲೆ ಇಲ್ಲದ 1.35 ಲಕ್ಷ ರೂ.ಮೊತ್ತದ ತಂಬಾಕು, ಸಿಗರೇಟ್ ವಶ
ಕಲಬುರಗಿ,ಏ.4-ತಾಂಡೂರದಿಂದ ಚಿಂಚೋಳಿಗೆ ಸಾಗಿಸುತ್ತಿದ್ದ ಯಾವುದೇ ದಾಖಲೆ ಇಲ್ಲದ 1.35 ಲಕ್ಷ ರೂ.ಮೊತ್ತದ ವಿವಿಧ ಕಂಪನಿಯ ತಂಬಾಕು ಮತ್ತು ಸಿಗರೇಟ್‍ನ್ನು ಮಿರಿಯಾಣ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ.
ಮಿರಿಯಾಣ ಚೆಕ್ ಪೋಸ್ಟ್ ಬಳಿ ವಾಹನ ಪರಿಶೀಲನೆ ತಂಬಾಕು ಮತ್ತು ಸಿಗರೇಟ್‍ನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 7 ಲಕ್ಷ ರೂ.ಮೊತ್ತದ ವಾಹನ ಮತ್ತು ಅದರಲ್ಲಿದ್ದ ತಂಬಾಕು ಮತ್ತು ಸಿಗರೇಟ್‍ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.