ಸಿದ್ಧರಾಮ ಹೊನ್ಕಲ್ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ
ಶಹಾಪುರ,ಏ.4-ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಮೈಸೂರಿನ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ಎ.ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ” ಕರ್ನಾಟಕ ಸಾಹಿತ್ಯ ರತ್ನ” ಪ್ರಶಸ್ತಿ ನೀಡಿವೆ. ಏ. 7 ರಂದು ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲಾ ಆವರಣದಲ್ಲಿ ನಡೆವ ಎಂ.ಬಿ.ಸಂತೋಷ ಅವರ “ನೂಪುರ “À ಹೈಕು ಕೃತಿ, ಲೇಖಕಿ ವಾಣಿ ರಾಘವೇಂದ್ರ ಅವರ “ಡಾ.ಸ್ವೇತಾ” ಇಂಗ್ಲಿಷ್ ಕಾದಂಬರಿ ಮತ್ತು ಶೋಭಾ ಬಿ ಅವರ “ಭಾವತರಂಗದ ಪಯಣ” ಈ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಲು ಮೈಸೂರಿಗೆ ಅಹ್ವಾನಿತರಾಗಿರುವ ಹೊನ್ಕಲ್ ಅವರಿಗೆ ಈ ಪ್ರ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಜಂಟಿ ವೇದಿಕೆಗಳ ಲೇಖಕರಾದ ಎಂ.ಬಿ.ಸಂತೋಷ ಹಾಗೂ ಖ್ಯಾತ ಹಿರಿಯ ಲೇಖಕಿ ಎ.ಹೇಮಗಂಗಾ ಮೈಸೂರು ಅವರು ತಿಳಿಸಿದ್ದಾರೆ.