ಬೆದರಿಕೆ ಹಾಕಿರುವ ವ್ಯಕ್ತಿಯ ಬಂಧಿಸಿ : ಬೇವಿನಕರ್
ಕಾಳಗಿ.ಎ.4: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗೆ ಪತ್ತೆ ಹಚ್ಚಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕಾಳಗಿ ತಾಲೂಕು ದಲಿತ ಸೇನೆ ಅಧ್ಯಕ್ಷ ನಾಗರಾಜ ಬೇವಿನಕರ್ ಆಗ್ರಹಿಸಿದ್ದಾರೆ.
ರಾಜ್ಯದ ಯುವಕರ ಕಣ್ಮಣಿಯಾಗಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ ಸಚಿವರಾದ ಪ್ರಿಯಾಂಕ ಖರ್ಗೆ ಯವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆ ಸರ್ಕಾರದ ಹೊಣೆಯಾಗಿರುತ್ತದೆ. ಸಚಿವರಿಗೆ ಮೊದಲು ಸೆಕ್ಯೂರಿಟಿ ನೀಡಬೇಕು. ನಂತರದಲ್ಲಿ ತಡ ಮಾಡದೇ ಆ ಪತ್ರ ಎಲ್ಲಿಂದ ಬಂತು ಯಾರಿಂದ ಬಂತು ಎನ್ನುವುದು ಪತ್ತೆ ಹಚ್ಚಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಿಯಾಂಕ ಖರ್ಗೆ ಅವರು ಒಳ್ಳೆಯ ಜನನಾಯಕರಾಗಿ ಬೆಳೆಯುತ್ತಿರುವುದು ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ಅವರ ನೇರ ನುಡಿ ಸತ್ಯವಾದ ಪ್ರಶ್ನೆಗಳು ಹಾಗೂ ಹರಿತವಾದ ಮಾತುಗಳಿಂದ ವಿರೋಧಿಗಳು ತಲೆತಗ್ಗಿಸುವಂತೆ ಆಗುತ್ತಿದೆ. ಹಾಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ಮನೋಭಾವ ಹೊಂದಿರುವ ವ್ಯಕ್ತಿಗಳು ಯಾರೇ ಆಗಿರಲಿ ಅವರನ್ನು ಕಾನೂನು ರೀತಿಯಲ್ಲಿ ಕೂಡಲೇ ಕಠಿಣ ಕ್ರಮ ವಹಿಸಬೇಕು ಎಂದರು.