ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸುವವರ ಕೊರತೆ ಇದೆ; ಹೇಮಲತಾ ವಸ್ತ್ರದ ವಿಷಾದ
ವಿಜಯಪುರ,ಏ.4; ಗತ ಕಾಲದಲ್ಲಿ ವಿಜಯಪುರಕ್ಕೆ ಹೊರಗಿನಿಂದ ದೊಡ್ಡ ದೊಡ್ಡ ಸಾಹಿತಿಗಳನ್ನು ಕರೆಸುವ ಮತ್ತು ಅವರಿಂದ ಕಿರಿಯರಿಗೆ ಮಾರ್ಗದರ್ಶನ ಕೊಡಸಿಸುವ ಮೂಲಕ ಇಲ್ಲಿನ ಸಾಹಿತ್ಯವನ್ನು ಉಳಿಸಿ ಎಲೆ ಮರೆಯಂತಿರುವ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿತ್ತು. ಆದರೆ ವರ್ತಮಾನದಲ್ಲಿ ವಿವಿಧ ಸಾಹಿತ್ಯದ ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವ ಸಾಹಿತ್ಯ ಸಂಘಟನೆಗಳ ಕೊರೆತೆ ಇದೆ ಎಂದು ಹಿರಿಯ ಸಾಹಿತಿ ಹಾಗೂ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಹೇಮಲತಾ ವಸ್ತ್ರದ ಅವರು ವಿಷಾದ ವ್ಯಕ್ತಪಡಿಸಿದರು.
ವಿಜಯಪುರದ ಜಲನಗರದಲ್ಲಿ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆಯ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಂಧರ್ಭಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡುವ ಸಂಧರ್ಭಗಳ ಕೊರತೆ ಇಂದಿನ ಆಧುನಿಕ ಯುಗದಲ್ಲಿ ಕಂಡು ಬರುತ್ತಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಮಾತ್ರ ಮಹಿಳೆಯರಿಗೆ ವಿರಳ ಅವಕಾಶ ನೀಡಿದಂತೆ ಮಾಡಿ ಪುರುಷರೇ ಕಾರ್ಯಭಾರ ಮಾಡುವದು ಗುಟ್ಟಾಗಿ ಉಳಿದಿಲ,್ಲ ಇಂತಹ ವ್ಯವಸ್ಥೆ ಬದಲಾಗಿ ತೊಟ್ಟಿಲ ತೂಗಿದ ಕೈ ಜಗವನ್ನೆ ತೂಗಬಲ್ಲದೂ ಎಂಬಂತೆ ಮಹಿಳೆಯರನ್ನು ಮುಖ್ಯ ನಿರ್ಣಯ ಕೈಗೊಳ್ಳವಾಗಲು ಅವಳಿಗೆ ಭಾಗವಹಿಸುವೆಕೆಗೆ ಮುಕ್ತ ಅವಕಾಶ ಕಲ್ಪಿಸಿ ಅವಳ ಭಾವನೆಗಳಿಗೂ ಸ್ಪಂದಿಸಬೇಕೆಂದು ಸಂಘ ಸಂಸ್ಥೆಗಳಿಗೆ ಕರೆ ಕೊಟ್ಟರು. ವಿಜಯಪುರ ಸಾಹಿತ್ಯವನ್ನು ಮತ್ತಷ್ಟು ಮೇಲ್ಮಟ್ಟಕ್ಕೊಯ್ಯಲು ಇಲ್ಲಿನ ಯುವ ಶಕ್ತಿ ಶ್ರಮಿಸಬೇಕು ವಿಶೇಷವಾಗಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಬೇಕೆಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ, ಶಿವ, ಪಾರ್ವತಿ, ಗಂಗೆ ಅವರುಗಳಿಂದ ಹಿಡಿದು ಅಕ್ಕಮಹಾದೇವಿಯ ವರೆಗೂ ಮಹಿಳೆಯರಿಗೆ ಬಹುದೊಡ್ಡ ಸಾಮಾಜಿಕ ಸ್ಥಾನ ಕೊಡಲಾಗಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಅಲ್ಲದೇ ಮಾತೃದೇವೋ ಭವ ಎಂಬ ನಾಣ್ಣುಡಿ ಸಹ ಮಹಿಳೆಗೆ ನೀಡಿದ ಗೌರವ ಆಗಿದೆ. ಆದರೆ ಕೆಲ ಶತಮಾನಗಳಿಂದ ಮಹಿಳೆಗೆÉÉ ಪುರಷನಿಗೆ ಸಮಾನವಾದ ಅವಕಾಶ ನೀಡದೇ ಮಹಿಳೆಯರನ್ನು ವಂಚಿತರನ್ನಾಗಿ ಮಾಡಿದ ವ್ಯವಸ್ಥೆಯ ವಿರುದ್ದ ಬಂಡಾಯ ಸಾಹಿತ್ಯ ಹುಟ್ಟಿಕೊಂಡಿದೆ. ಅದರ ಪ್ರತಿಫಲವಾಗಿ ಇಂದು ಮಹಿಳೆಯರು ಮೇಲ್ಮಟ್ಟಕ್ಕೆ ಬರುವಂತಾಗಿದೆ. ಸುಸ್ಮಾ ಸ್ವರಾಜ್, ಇಂದಿರಗಾಂಧಿ, ನಿರ್ಮಲಾ ಸೀತಾರಾಮ, ಮುರುಮು ಮುಂತಾದ ಮಹಿಳೆಯರ ಬೆಳವಣಿಗೆ ಸಮಾಜಕ್ಕೆ ಪೂರಕವಾಗಿದೆ. ಅದೇ ರೀತಿ ಇತರ ಕ್ಷೇತ್ರಗಳಲ್ಲೂ ಮಹಿಳೆಯನ್ನು ಬೆಳಸಬೇಕಿದೆ ಎಂದರು.
ಕುಸುಮಾ ಹಿರೇಮಠ ಅವರು ಮಾತನಾಡಿ, ಮಹಿಳೆಯರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕಾಗ ಅದನ್ನು ಮಹಿಳೆಯರು ಸರಿಯಾಗಿ ಬಳಸಿಕೊಂಡು ಉತ್ತಮ ಶಕ್ತಿವಂತರಾಗಿ ಬೆಳೆಯಬೇಕು. ಸಾಹಿತ್ಯ ವಲಯದಲ್ಲಿ ಸೌಹದರ್Àತೆ ಮತ್ತು ಸಮಾನತೆಯ ಅಗತ್ಯವಿದೆ ಎಂದು ತಿಳಿಸಿದರು.
ಸುಜಾತ ಕೆಂಪವಾಡ ಅವರು ಮಾತನಾಡಿ, ಮಹಿಳೆಯರು ವಾರಕ್ಕೊಮ್ಮೆ ಸೇರಿ ಸಾಹಿತ್ಯ, ಸಂಗೀತ ಕಮ್ಮಟಗಳನ್ನು ಹಮ್ಮಿಕೊಂಡು ಸಾಹಿತ್ಯಕ ಹವ್ಯಾಸ ಬೆಳಸಿಕೊಂಡರೆ ಮಹಿಳಾ ಸಬಲೀಕರಣಕ್ಕೆ ಪೂರಕ ವಾತಾವರಣ ಸೃಷ್ಠಿಯಾಗುತ್ತದೆ ಎಂದು ನುಡಿದರು.
ಯುವ ನ್ಯಾಯವಾದಿ ತ್ರಿವೇಣಿ ಬಜಂತ್ರಿ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವತಿಯರು ಪ್ರೀತಿ ಪ್ರೇಮದ ಬಲೆಗೆ ಸಿಲುಕದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಾಹಿತ್ಯಿಕ ಮನೋಭಾವನೆ ಬೆಳೆಸಿಕೊಂಡು ಕವಿತೆ, ಕತೆ ಬರೆಯುವುದನ್ನು ರೂಢಿ ಮಾಡಿಕೊಂಡು ಸಮಾಜದಲ್ಲಿನ ಸ್ವಾಸ್ತ್ಯ ಕಾಪಾಡಲು ಮುಂದೆ ಬರಬೇಕೆಂದು ಕರೆ ನೀಡಿದರು.
ಗುರು ಹಿರೇಮಠ, ಮನ್ವಿತ್, ಪ್ರಭಾಕರ ಪತ್ತಾರ, ಶಾಂತೇಶ ಜಾಲಗೇರಿ, ಓಗೆಪ್ಪ ಕೆಂಪವಾಡ. ಸುಜಾತ ಕೆಂಪವಾಡ ಮುಂತಾದವರು ಪಾಲ್ಗೊಂಡಿದ್ದರು.