ಉಚಿತ ಬೇಸಿಗೆ ಶಿಬಿರ
ಗುರುಮಠಕಲ್: ಏ.4:ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಗುರುಮಠಕಲ್ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಕಲವಾರ್ ಬೇಸ್ ಗುರುಮಠಕಲ್ ನಲ್ಲಿ ಉಚಿತ ಬೇಸಿಗೆ ಶಿಬಿರ ನಡೆಯುತ್ತಿದ್ದು ಸುತ್ತಮುತ್ತಲಿನ 5 ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿದುಕೊಳ್ಳಲೆಂದುಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಜಮುನಬಾಯಿ ಮೇಡಂ ಹಾಗೂ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ನಾಗೇಶ್.ಡಿ ರವರು ತಿಳಿಸಿದರು.
ಈ ಬೇಸಿಗೆ ಶಿಬಿರದಲ್ಲಿ ಇಂಜಿನಿಯರಿಂಗ್ ಆಧಾರಿತ ಕಲಿಕೆ,ಇನವೇಷನ್ ಹಬ್ ತರಗತಿಗಳು , ಕಡಿಮೆ ವೆಚ್ಚದ ವಿಜ್ಞಾನ ಮಾದರಿಗಳು ತಯಾರಿಸುವುದು , ವಿಶೇಷ ಆಟೋಟಗಳೊಂದಿಗೆ ರಸಪ್ರಶ್ನೆ, ಚಿತ್ರಕಲೆ, ಸಂಗೀತ, ಚರ್ಚೆ ಸ್ವರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಲು ಈ ಬೇಸಿಗೆ ಶಿಬಿರವನ್ನುಹಮ್ಮಿಕೊಂಡಿದ್ದೇವೆ . ಆದ ಕಾರಣ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಲೆಂದು ತಿಳಿಸಿದರು