ಪರೀಕ್ಷಾ ಕೇಂದ್ರಕ್ಕೆ ಕುಲಸಚಿವರ ಭೇಟಿ: ತಪಾಸಣೆ
ಕಲಬುರಗಿ: ಏ.4:ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಪದವಿ ಪರೀಕ್ಷೆಗಳ ಕೇಂದ್ರಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ ಕುಲಸಚಿವರು ( ಮೌಲ್ಯಮಾಪನ) ಡಾ.ಎಮ್.ಚಂದ್ರಶೇಖರ್ ಹಾಗೂ ಜಾಗೃತ ದಳದ ಅಧ್ಯಕ್ಷ ಡಾ.ಧರ್ಮಣ್ಣ ಬಡಿಗೇರ ಅವರು ಧಿಡರನೆ ಭೇಟಿ ನೀಡಿ ಪರಿಶಿಲಿಸಿದರು .
ಇದೇ ಸಂಧರ್ಬದಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಪರೀಕ್ಷಾ ಸಿಬ್ಬಂದಿ ಶ್ರೀಮತಿ ರಾಜೇಶ್ವರಿ ಕಾರಬಾರಿ ಹಾಗೂ ಶ್ರೀ ಲಿಯಾಕತ್ ಇವರ ಕೆಲಸದ ಅಚ್ಚುಕಟ್ಟುತನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು ,ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಉಪಸ್ಥಿತರಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ.ಮೋಹನರಾಜ್ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.