ನುಡಿ ನಮನ
ಆಲಮೇಲ :ಏ.4:ಪಟ್ಟಣದ ಗ್ರಾಮೀಣ ಅಭಿವೃದ್ದಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತಿಚೆಗೆ ವಿಧಿವಶರಾದ ಸಿಂದಗಿಯ ಹಿರಿಯ ಸಾಹಿತಿಗಳು ಹಾಗೂ ಖ್ಯಾತ ವೈದ್ಯರು ಡಾ.ಬಿ.ಆರ್ ನಾಡಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಣೆ ಮಾಡಿ ನುಡಿ ನಮನ ಸಲ್ಲಿಸಿದರು.
ಬಳಿಕ ಶಾಲೆಯ ಅಧ್ಯಕ್ಷರಾದ ಶಿವಕುಮಾರ ಗುಂದಗಿಯವರು, ಹಿರಿಯ ಸಾಹಿತಿ ಹಾಗೂ ವೈದ್ಯ ಡಾ.ಬಿ.ಆರ್. ನಾಡಗೌಡರು ವೈದ್ಯಕೀಯ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅದ್ಬುತ ಬಹುಮುಖ ಪ್ರತಿಭೆವುಳ್ಳವರಾಗಿದ್ದರು. ಈ ಗ್ರಾಮೀಣ ಅಭಿವೃದ್ದಿ ಶಿಕ್ಷಣ ಸಂಸ್ಥೆಗೆ ಸ್ಥಳವನ್ನು ನೀಡಿದ್ದು, ಈ ಗ್ರಾಮೀಣ ಜನರಿಗೆ ಗುಣಮಟ್ಟದ ಶಿಕ್ಷಣ ಈ ಭಾಗಕ್ಕೆ ಸಿಗಲಿ ಎಂದು ಸಂಸ್ಥೆ ವಿಶಾಲವಾಗಿ ಬೆಳೆಯಲಿಕ್ಕೆ ಕಾರಣೀಭೂತರೆಂದು ಕೊಡುಗೈ ಧಾನಿಗಳಾಗಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಅವದೂತ್ ಜೋಶಿ, ಪಿ.ಟಿ.ಪಾಟೀಲ್, ರವೀಂದ್ರ ಕುಲಕರ್ಣಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯಗುರುಗಳು, ಎಸ್,ಆರ್. ಪೂಜಾರಿ, ಜಿ.ಕೆ.ಅಂಬೂರೆ, ಸಂಸ್ಥೆಯ ಶಿಕ್ಷಕರು, ಹಾಗೂ ಗುರುಮಾತೆಯರು, ವಿದ್ಯಾರ್ಥಿಗಳು ಇದ್ದರು.