ಕಿರಾಣಿ ಅಂಗಡಿ ಮೇಲೆ ಅಬಕಾರಿ ದಾಳಿ
ಯಾದಗಿರಿ : ಏ.4 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ, 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.03, 2024ರ ಏಪ್ರಿಲ್ 2 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಕಲಬುರ್ಗಿ ವಿಭಾಗ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ರವರ ಆದೇಶದಂತೆ ಮತ್ತು ಮಾನ್ಯ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪುರ ಅವರ ಮಾರ್ಗದರ್ಶನದಲ್ಲಿ ಮಾನ್ಯ ಅಬಕಾರಿ ಜಂಟಿ ಆಯುಕ್ತರ ಕಚೇರಿ ಕನಬುರಗಿಯ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಪ್ರಿಯಾಂಕ. ಶ್ರೀ ಸಿದ್ರಾಮ್ ಸುಣಗಾರ್ ಅಬಕಾರಿ ನಿರೀಕ್ಷಕರು, ಸುರಪುರ ವಲಯ, ಶ್ರೀ ಶರಣಗೌಡ ಬಿರಾದಾರ, ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಅಧೀಕ್ಷಕರ ಕಚೇರಿ ಶಹಾಪುರ, ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಸಂದೀಪ್ ನಾಯಕ, ಶ್ರೀ ಸಂಪತ್ ಕುಮಾರ, ಶ್ರೀ ಯಮನಪ್ಪ ಹಾಗೂ ವಾಹನ ಚಾಲಕರಾದ ಶ್ರೀ ರಮೇಶ ದೇಸಾಯಿ ಸುರಪುರ ವಲಯ ರವರು ಕೂಡಿಕೊಂಡು ಖಚಿತ ಭಾತ್ಮಿಮೆರೆಗೆ ಹುಣಸಗಿ ತಾಲೂಕಿನ ಬೇನಕನಹಳ್ಳಿ ಗ್ರಾಮದ ತಿರುಪತಿ ತಂದೆ ರಂಗಯ್ಯ ಚೆನ್ನದಾಸರ್ ಈತನಿಗೆ ಸೇರಿದ ಕಿರಾಣಿ ಅಂಗಡಿ ಮೇಲೆ ಸಾಮೂಹಿಕ ಅಬಕಾರಿ ದಾಳಿ ಮಾಡಿ ಪರಿಶೀಲಿಸಿದಾಗ ಐ.ಬಿ ವಿಸ್ಕಿ ಅಂತ ಮುದ್ರಿತ 180 ಎಂ.ಎಲ್ ನ 42 ಬಾಟಲಿಗಳು (7.560 ಲೀಟರ್ ಮದ್ಯ), ಎಂಸಿ ವಿಸ್ಕಿ ಅಂತ ಮುದ್ರಿತ 180 ಎಂ.ಎಲ್ ನ 11 ಬಾಟಲಿಗಳು (1.980 ಲೀಟರ್ ಮದ್ಯ), ಒರಿಜಿನಲ್ ಚಾಯ್ಸ್ ವಿಸ್ಕಿ ಅಂತ ಮುದ್ರಿತ 90 ಎಂ.ಎಲ್ ನ 58 ಟೆಟ್ರಾ ಪ್ಯಾಕೆಟ್ ಗಳು (5.200 ಲೀಟರ್ ಮದ್ಯ), ಬಿ.ಪಿ ವಿಸ್ಕಿ ಅಂತ ಮುದ್ರಿತ 180 ಎಂ.ಎಲ್ ನ 35 ಟೆಟ್ರಾ ಪ್ಯಾಕೆಟ್‍ಗಳು (6.300 ಲೀಟರ್ ಮದ್ಯ) ಹೀಗೆ ಒಟ್ಟು 21.04 ಲೀಟರ್ ಮದ್ಯ ವಶಪಡಿಸಿಕೊಂಡು ಆರೋಪಿ ವಿರುದ್ದ ಅಬಕಾರಿ ನಿರೀಕ್ಷಕರು, ಮಾನ್ಯ ಅಬಕಾರಿ ಜಂಟಿ ಆಯುಕ್ತರ ಕಚೇರಿ ಕಲಬುರ್ಗಿ ಅವರ ಪ್ರಕರಣ ದಾಖಲಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.