ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮ5ನೇ ಸುತ್ತಿನ ಕಾಲು, ಬಾಯಿ, ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಬೀದರ. ಏ. 04: ರಾಷ್ಟೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲು, ಬಾಯಿ, ಜ್ವರ ಲಸಿಕಾ ಕಾರ್ಯಕ್ರಮವು ದಿನಾಂಕ 02-04-2024 ರಂದು ಜಿಲ್ಲಾ ಮಟ್ಟದಲ್ಲಿ ಬೀದರ ನಗರದ ರಾಮಕೃಷ್ಟ ಆಶ್ರಮದ ಗೋಶಾಲೆಯ ಆವರಣದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ, ಜಾನುವಾರುಗಳಿಗೆ ಲಸಿಕೆ ಹಾಕಿ ಸಸಿಗೆ ನೀರೆರೆಯುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಬೀದರನ ಪುಶುವೈದ್ಯಕೀಯ ವಿಶ್ವವಿದ್ಯಾಲದ ಉಪಕುಲಪತಿಗಳಾದ ಡಾ|| ಕೆ.ಸಿ. ವೀರಣ್ಣ ಅವರು ಚಾಲನೆ ನೀಡಿದರು.
ಈ ಲಸಿಕಾ ಕಾರ್ಯಕ್ರಮವು ಜಿಲ್ಲೆಯಾದ್ಯಂತ ದಿನಾಂಕ 01-04-2024ರಿಂದ 30-04-2024ರ ವರೆಗೆ ರೈತರ ಮನೆ ಬಾಗಿಲಿಗೆ ಲಿಸಿಕೆದಾರರು ಆಗಮಿಸಿ, ದನ ಹಾಗೂ ಎಮ್ಮೆಗಳಿಗೆ ಎಫ್.ಎಮ್.ಡಿ ಲಸಿಕೆಯನ್ನು ಉಚಿತವಾಗಿ ತಮ್ಮ ಜಾನುವಾರುಗಳಿಗೆ ಹಾಕಿಸಿಕೊಂಡು ರೋಗವನ್ನು ತಡೆಗಟ್ಟಲು ಮತ್ತು ಎಫ್.ಎಮ್.ಡಿ.ಸಿ.ಪಿ ಕಾರ್ಯಕ್ರಮವನ್ನು ಎಲ್ಲಾ ರೈತಬಾಂಧವರು ಸದುಪಯೋಗ ಪಡೆದುಕೊಳ್ಳಲು ಗಣ್ಯರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದರ ನಗರದ ರಾಮಕೃಷ್ಣ ಆಶ್ರಮದ ಶ್ರೀ ಜ್ಯೋತ್ಮರ್ಮಯಾನಂದ ಸ್ವಾಮಿಜಿ ಅವರು ದಿವ್ಯಸಾನಿಧ್ಯವನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶು ಪಾಲನಾ ಮತ್ತು ಪಶುವೈದ್ಯ ಸೇವ ಇಲಾಖೆಯ ಉಪ ನಿರ್ದೇಶಕ ಡಾ|| ನರಸಪ್ಪ ಎ.ಡಿ., ಪಾಲಿ ಕ್ಲಿನಿಕ್‍ನ ಉಪನಿರ್ದೇಶಕರಾದ ಡಾ|| ರವೀಂದ್ರಕುಮಾರ ಭೂರೆ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ|| ಉದಯಕುಮಾರ, ಪಶು ಪಾಲನಾ ಇಲಾಖೆಯ ಡಾ|| ನಾಗರಾಜ, ಡಾ|| ನೀಲಕಂಠ ಚೆನ್ನಶೆಟ್ಟಿ, ಡಾ|| ಶ್ರೀಕಾಂತ ಬಿರಾದಾರ ಡಾ|| ಸಂಗಮೇಶ, ಡಾ|| ಶಿವಮೂರ್ತಿ, ಡಾ|| ಜಗದೀಶ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿರಿದ್ದರು.