ಶ್ರೀದೇವಿ ಪುರಾಣ ಉದ್ಘಾಟನೆ
ಮುನವಳ್ಳಿ,ಮಾ.4: ಪಟ್ಟಣದ ಶ್ರೀ ಸೂಲಕಟ್ಟಿ ಕರೇಮ್ಮದೇವಿ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಶ್ರೀ ದೇವಿ ಪುರಾಣ ಉದ್ಘಾಟನಾ ಸಮರಾಂಭವನ್ನು ಉದ್ಘಾಟಿಸಿ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಶ್ರೀಗಳು ಮಾತನಾಡಿ ಮಕ್ಕಳಿಗೆ ಸಂಸ್ಕಾರ ಕೊಡುವಲ್ಲಿ ತಾಯಿ ಪಾತ್ರ ಬಹಳ ಮುಖ್ಯ. ಮೊಬೈಲ ಬಳಕೆ ಮಕ್ಕಳ ಮುಂದೆ ಬೇಡ ಅದಕ್ಕಾಗಿ ತಾಯಂದಿರಲ್ಲಿ ಮಕ್ಕಳ ಬಗ್ಗೆ ಜಾಸ್ತಿ ಕಾಳಜಿ ವಹಿಸಿ ನಮ್ಮ ಸಂಸ್ಕøತಿಯ ಬಗ್ಗೆ ತಿಳವಳಿಕೆ ನೀಡಿ ಬೆಳಸುವದು ಉತ್ತಮ ಎಂದರು.
ಗದಗಿನ ಪ್ರವಚನಕಾರ ಶ್ರೀ ಎಂ.ಕಲ್ಲಿನಾಥ ಶಾಸ್ತ್ರೀಗಳು ಮಾತನಾಡಿ ದೇವಿ ಪುರಾಣ ದೇಹದ ಪುರಾಣ ಒಂದೇ ದೇವಿ ಪುರಾಣದಲ್ಲಿದೇವಿಯು ರಾಕ್ಷಸರನ್ನು ಸಂಹಾರ ಮಾಡುತ್ತಾಳೆ ದೇಹದ ಪುರಾಣದಲ್ಲಿ ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ನಾಶ ಮಾಡುತ್ತ ಹೋದರೆ ಮಾನವನೆ ಮಹಾದೇವನಾಗುತ್ತಾನೆ ನರ ನಾರಾಯಣಾಗುತ್ತಾನೆ ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಿಕೊಳ್ಳಬಾರದು ಎಂದರು.
ಚೀಕಲಪರ್ವಿಯ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ ದೇವಿಯಲ್ಲಿ ಭಕ್ತಿ ಶ್ರದ್ದೆಯನ್ನಿಟ್ಟು ಪೂಜಿಸಿದರೆ ದೇವಿ ಬೇಡಿದುದನ್ನು ಕೊಡುತ್ತಾಳೆ ಎಂದರು. ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನಿಡಿದರು.
ಅಧ್ಯಕ್ಷತೆ ಬಸವನಗೌಡ ದ್ಯಾಮನಗೌಡ್ರ, ಪಂಚಪ್ಪ ಗುಂಡ್ಲೂರ, ನಿಂಗನಗೌಡ ಮಲಗೌಡ್ರ, ರುದ್ರಪ್ಪ ಕಟೆಗೆನ್ನವರ, ಬಸವರಾಜ ದೊಡಮನಿ, ಉಷಾ ಗೋಪಶೆಟ್ಟಿ, ಶ್ರೀಕಾಂತ ನೇಗಿನಹಾಳ, ಬಿ.ಬಿ.ಹೂಲಿಗೊಪ್ಪ, ಮೋಹನ ಕಾಮಣ್ಣವರ, ಮಲ್ಲಿಕಾರ್ಜುನ ಕಮತಗಿ, ಲಕ್ಷ್ಮಣ ಕಾಮಣ್ಣವರ, ಎಸ್.ಬಿ.ಹಿರಲಿಂಗಣ್ಣವರ, ನಿಂಗಪ್ಪ ಹನಸಿ, ಸುಭಾಸ ಬಾರಕೇರ, ಮಲ್ಲಿಕಾರ್ಜುನ ರಡರಟ್ಟಿ, ರಾಜಪ್ಪ ಚಂದರಗಿ, ನಿಂಗಪ್ಪ ಮಾಟನವರ, ಯಲ್ಲಪ್ಪ ಜಾಲಗಾರ, ಜಾತ್ರಾ ಉತ್ಸವ ಕಮಿಟಿ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.