ಪುಸ್ತಕ ಬಿಡುಗಡೆ, ಉಪನ್ಯಾಸ
ಧಾರವಾಡ,ಏ.4:ಸಾಹಿತ್ಯರಚನೆಯ ಮೂಲಕ ಜನರ ಪ್ರೀತಿಗೆಜಿನದತ್ತದೇಸಾಯಿಯವರು ಹತ್ತಿರವಾದವರು. ಚುಟುಕು ಸಾಹಿತ್ಯಕ್ಷೇತ್ರಕ್ಕೆಅವರೊಬ್ಬಗರುಡಗಂಭವಾಗಿದ್ದಾರೆ.ಚುಟುಕು ಸಾಹಿತ್ಯ ನಿತ್ಯದ ಬದುಕಿಗೆಜೀವಧ್ವನಿಯಾಗಿದೆ.ಅದು ಸಹೃದಯಅಂತಃರಂಗದ ಹೃದಯವನ್ನುತಟ್ಟುತ್ತದೆ, ಮುಟ್ಟುತ್ತದೆ.ಮೃದುವಾದ ಸ್ಪರ್ಶವನ್ನು ನೀಡುತ್ತದೆಎಂದು ಮೈಸೂರಿನ ಸಾಹಿತಿಎಂ.ಜಿ.ಆರ್.ಅರಸ್‍ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕವಿ ಡಾ.ಜಿನದತ್ತದೇಸಾಯಿದತ್ತಿ ಅಂಗವಾಗಿ ಆಯೋಜಿಸಿದ್ದ ಡಾ. ಜಿನದತ್ತರ ಚುಟುಕುಗಳು' ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ, ಕೃತಿಕುರಿತು ಮಾತನಾಡಿದರು. ಜೀವ ಕಳೆತುಂಬಿದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದುತಮಗೆ ಬಂದಎಲ್ಲ ಪ್ರಶಸ್ತಿಗಳ ಮೊತ್ತವನ್ನು ಶಿಕ್ಷಣ ಸಂಸ್ಥೆಗೆ ದಾನ ನೀಡಿದವರು.ಇಂತಹ ಮಹಾನ್ ವ್ಯಕ್ತಿತ್ವಕ್ಕೆ ಮುಂಬರುವ ದಿನಗಳಲ್ಲಿ2023ರ ಚುಟುಕುರತ್ನ ಪ್ರಶಸ್ತಿ’ಯನ್ನ ನೀಡಿಗೌರವಿಸಲಾಗುವುದುಎಂದು ಹೇಳಿದರು.
ಡಾ. ಜಿನದತ್ತರಕಾವ್ಯದಲ್ಲಿ ಸಮಾಜಮುಖಿಚಿಂತನೆ ವಿಷಯಕುರಿತು ಮಾತನಾಡಿದ ಹೊನ್ನಾವರದ ಹಿರಿಯ ಸಾಹಿತಿಡಾ. ಶ್ರೀಪಾದ ಶೆಟ್ಟಿ, ಕಿರಿದರಲ್ಲಿಯೇ ಹಿರಿದಾದಅರ್ಥಕೊಡುವದುಚುಟುಕು ಸಾಹಿತ್ಯ.ಜಿನದತ್ತದೇಸಾಯಿಯವರು ಬಾಲ್ಯದಿಂದಲೇಕಾವ್ಯರಚನೆಗೆತಮ್ಮನ್ನು ತೊಡಗಿಸಿಕೊಂಡವರು. ವೃತ್ತಿ ಬದುಕಿನಲ್ಲಿ ಹಿಂದೆ ಸರಿದಿದ್ದಕಾವ್ಯರಚನೆ, ನಿವೃತ್ತಿಯ ನಂತರಅಂತರಗಂಗೆಯಾಗಿಅವರಕಾವ್ಯ ಪ್ರತಿಭೆ ಪ್ರವಹಿಸಿದ್ದುಂಟು.ಪ್ರಕೃತಿ, ಸಾಮಾಜಿಕಚಿಂತನೆ, ಸಂವೇದನಾ ಶೀಲತೆಗಳಿಂದ ಅವರಕಾವ್ಯ ಸತ್ವಯುತವಾದದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಒಂದು ಮಹಾನ್‍ಗ್ರಂಥಕೊಡಬಹುದಾದ ಶಕ್ತಿಯನ್ನುಒಂದೊಂದು ಚುಟುಕುಗಳು ಕೊಡುತ್ತವೆ. ಬೊಗಸೆಯಲ್ಲಿ ಸಮುದ್ರವನ್ನು ಹಿಡಿದಿಟ್ಟರೀತಿಯಲ್ಲಿಚುಟುಕು ಸಾಹಿತ್ಯಅಗಾಧವಾದಅರ್ಥವನ್ನು ಒಳಗೊಂಡಿರುತ್ತದೆ.ಜಿನದತ್ತದೇಸಾಯಿಯವರ ಕಾವ್ಯಗಳನ್ನು ಓದಿದಾಗ ಪ್ರಕೃತಿ ಪ್ರೇಮ, ದಾಂಪತ್ಯ ಪ್ರೇಮ, ನಾಡು-ನುಡಿಚಿಂತನೆ, ವೈಜ್ಞಾನಿಕಚಿಂತನೆ ಈ ರೀತಿ ಪ್ರಪಂಚದಎಲ್ಲ ಅನುಭವಗಳನ್ನು ಕಾವ್ಯಾನುಭವಗಳನ್ನಾಗಿ ಮಾಡಿಕೊಂಡು ಸಾಹಿತ್ಯರಚನೆ ಮಾಡಿದ್ದಾರೆ ಎಂದರು.
ಮೈಸೂರಿನಕೌಸ್ತುಭ ಮಾಸಪತ್ರಿಕೆಯ ಸಂಪಾದಕಿಡಾ.ರತ್ನಾ ಹಾಲಪ್ಪಗೌಡ ಮತ್ತು ಬೆಂಗಳೂರಿನ ಚುಟುಕು ಸಾಹಿತ್ಯ ಪರಿಷತ್‍ಕೇಂದ್ರದ ಧರ್ಮದರ್ಶಿ ವೀರಭದ್ರೇಗೌಡಆಂದಲೆ ಮುಖ್ಯಅತಿಥಿಯಾಗಿ ಮಾತನಾಡಿದರು. ವೇದಿಕೆ ಮೇಲೆ ಡಾ.ಜಿನದತ್ತದೇಸಾಯಿ, ದತ್ತಿದಾನಿ ವರ್ಧಮಾನದೇಸಾಯಿಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಪ್ರೊ.ಬಸವರಾಜಜಗಜಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಹೊರಕೇರಿ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು. ಮಧುಮತಿ ಸಣಕಲ್ಲ ಪ್ರಾರ್ಥಿಸಿದರು.