ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ
ನವಲಗುಂದ,ಏ4 : ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಭಗವಾನ ಶ್ರೀ 1008 ಪಾರ್ಶ್ವನಾಥ ತಿರ್ಥಂಕರರ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವು ಏ 5 ರಿಂದ ಏ 7 ರವರೆಗೆ ಜರುಗಲಿದೆ ಎಂದು ಶ್ರೀ 1008 ಶಾಂತಿನಾಥ ಜೈನ ದಿಗಂಬರ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ವಿ ಪಿ ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುಡಿಸಾಗರ ಗ್ರಾಮದ ಪ್ರಾಚಿನ ಕಾಲದ ದೇವಸ್ಥಾನವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ ಹಾಗೂ ದಾನಿಗಳ ಧನಸಹಾಯದಿಂದ ಜಿರ್ಣೋದ್ದಾರಗೊಂಡ ಮಾನ ಸ್ಥಂಭ ಶಿಖರ ಪೂರ್ಣಗೊಂಡು ದೇವಸ್ಥಾನವು ಶುಕ್ರವಾರದಿಂದ ರವಿವಾರದ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಎಂದರು.
ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಪ.ಪೂ. ಸಂತ ಶಿರೋಮಣಿ 108 ಪುಣ್ಯಸಾಗರ ಮುನಿಮಹಾರಾಜ, ಸೊಂದಾಮಠದ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಜಿ, ವರೂರ ಅಮ್ಮಿನಭಾವಿಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮಿಜಿ , ಹಾಗೂ ಕೊಲ್ಲಾಪುರ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಇವರುಗಳ ಸಾನಿಧ್ಯದಲ್ಲಿ ನೇರವೇರಲಿದೆ ಎಂದು ತಿಳಿಸಿದರು.
ಬಾಹುಬಲಿ ಬಸ್ತಿ, ಸೋಮನಗೌಡ ಹಿರೇಗೌಡ್ರ, ಅನಂತ ಮುರ್ಗಿನಕೊಪ್ಪ, ಸೋಮನಗೌಡ ಗೋವನಕೊಪ್ಪ, ಚಳ್ಳಪ್ಪಗೌಡ ಕಲ್ಲಿ, ಬಾಬುಗೌಡ ಜಕ್ಕನಗೌಡ, ಚಳ್ಳಪ್ಪಗೌಡ ಹಿರೇಗೌಡ್ರ, ವಿಜಯಗೌಡ ಪಾಟೀಲ್, ಭರಮಗೌಡ ಜಕ್ಕನಗೌಡ್ರ, ವಾಸುಗೌಡ ಪಾಟೀಲ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.