ಪರಿಕರ ವಿತರಣೆ
ಲಕ್ಷ್ಮೇಶ್ವರ,ಏ4: ಪಟ್ಟಣದ ಪುರಸಭೆಯ ಪೌರಕಾರ್ಮಿಕರಿಗೆ ಪುರಸಭೆಯ ಆವರಣದಲ್ಲಿ ಅವರ ದಿನನಿತ್ಯ ಕರ್ತವ್ಯದ ಪರಿಕರಗಳನ್ನು ವಿತರಿಸಲಾಯಿತು.
ಪರಿಕರವಿತರಿಸಿ ಮಾತನಾಡಿದ ಮುಖ್ಯ ಅಧಿಕಾರಿ ಮಹೇಶ್ ಹಡಪದವರು ಅವರು ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸಲು ಮುಂಜಾನೆಯಿಂದ ತಮ್ಮ ಆರೋಗ್ಯವನ್ನು ಗಮನಿಸದೇ ಕರ್ತವ್ಯ ನಿರ್ವಹಿಸುತ್ತಾರೆ ಅದಕ್ಕಾಗಿ ಪೌರಕಾರ್ಮಿಕರ ಆರೋಗ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆಯ ವತಿಯಿಂದ ಎಲ್ಲ ಪೌರಕಾರ್ಮಿಕರಿಗೆ ನಿತ್ಯದ ಕರ್ತವ್ಯದಲ್ಲಿ ಧರಿಸಬೇಕಾದ ಕೈಗವಸು ಮಾಸ್ಕ್ ಶಿರಸ್ತ್ರಾಣ ಶೂಸ್ ಕೋಟು ನೀಡಿ ಕರ್ತವ್ಯಕ್ಕೆ ಬರುವಾಗ ಕಡ್ಡಾಯವಾಗಿ ಇವುಗಳನ್ನು ಧರಿಸಿಕೊಂಡು ಬರಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದುಗಲ್ಲ, ಹನುಮಂತಪ್ಪ ನಂದಣ್ಣವರ, ಶಿವಣ್ಣ ಮ್ಯಾಗೇರಿ, ಬಸವರಾಜ ನಂದಣ್ಣನವರ ಸೇರಿದಂತೆ ಪುರಸಭೆಯ ಸಿಬ್ಬಂದಿ ಇದ್ದರು.