ಕಾಂಗ್ರೆಸ್ ಬ್ಯಾಟರಿ ಡೌನ್: ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಲೇವಡಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.04- ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬಳಿಕ ಕಾಂಗ್ರೆಸ್ ಬ್ಯಾಟರಿಡೌನ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೇವಡಿ ಮಾಡಿದರು.
ಅವರು ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಪರಬಿ.ವೈ.ವಿಜಯೇಂದ್ರ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಭರ್ಜರಿ ರೋಡ್ ಶೋ ಮೂಲಕ ಮತಬೇಟೆ ನಡೆಸಿ ಮಾತನಾಡಿದ ಅವರು. ಕಾಂಗ್ರೆಸ್ ಬ್ಯಾಟರಿ ಡೌನ್ ಆಗಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು ಗಾಬರಿಯಾಗಿ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಬಾಲರಾಜು ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಚಾಮರಾಜನಗರ ಲೋಕಸಭಾಕ್ಷೇತ್ರದಲ್ಲಿ ದುಡ್ಡಿನ ಅಹಂಕಾರ, ಹಣದ ಮದದಿಂದಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇವರನ್ನು ಗೆಲ್ಲಿಸುವ ಮೂಲಕ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಆವರಿಸುತ್ತದೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದ ವೇಳೆ ಕೆರೆ-ಕಟ್ಟೆಗಳು ಕೋಡಿ ಬಿದ್ದು ಪ್ರವಾಹ ಸ್ಥಿತಿ ಎದುರಾಗಿತ್ತು. ಜನರು ಕಾಂಗ್ರೆಸ್ ವಿರುದ್ಧ ಶಾಪ ಹಾಕುತ್ತಿದ್ದಾರೆ. ರೈತರ ಸಮಸ್ಯೆ ಪರಿಹರಿಸುವ ಬದಲುಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನುಜನರು ಗೆಲ್ಲಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕರುಣೆಇಲ್ಲವೇ?, ರಾಜ್ಯದಲ್ಲಿ 800 ಮಂದಿ ರೈತರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಲಿತರ ವಿರೋಧಿ, ರೈತ ವಿರೋಧಿಕಾಂಗ್ರೆಸ್ ಸರ್ಕಾರಕ್ಕೆತಕ್ಕ ಉತ್ತರವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೊಡಬೇಕು ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಗೆ ಬಿಜೆಪಿ ಸಂಸದ ಗೈರು: ಸಂಸದ ವಿ.ಶ್ರೀನಿವಾಸಪ್ರಸಾದ್ ಇಂದು ಬಿಜೆಪಿ ಅಭ್ಯರ್ಥಿ ಬಾಲರಾಜು ನಾಮಪತ್ರ ಸಲ್ಲಿಕೆಗೆ ಗೈರಾದರು. ಬಿಜೆಪಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ನಾಮಪತ್ರ ಸಲ್ಲಿಕೆಗೆ ಶ್ರೀನಿವಾಸಪ್ರಸಾದ್ ಬರಲಿದ್ದಾರೆ ಎಂದು ತಿಳಿಸಿತ್ತು. ಈಗಾಗಲೇ ಸಂಸದರ ಸಹೋದರ, ಸೋದರಳಿಯ ಮತ್ತು ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ.
ಇನ್ನುಚಾಮರಾಜನಗರದಲ್ಲಿಸಿಎಂ ಸಿದ್ದರಾಮಯ್ಯ ರೋಡ್‍ಶೋವೇಳೆ, ಡಿಸಿಎಂ ಡಿ.ಕೆ.ಶಿವಕುಮಾರ್‍ಮಾತನಾಡಿ, ಹಾಲಿಬಿಜೆಪಿಸಂಸದವಿ.ಶ್ರೀನಿವಾಸಪ್ರಸಾದ್‍ಅವರುಸುನಿಲ್‍ಬೋಸ್‍ಗೆ ಆಶೀರ್ವಾದಮಾಡಿ ಕಳುಹಿಸಿದ್ದಾರೆ. ಅವರಬೆಂಬಲ, ಅವರಹಿತೈಷಿಗಳಬೆಂಬಲಕೊಟ್ಟುಚಾಮರಾಜನಗರಕ್ಕೆಸುನೀಲ್‍ಬೋಸ್‍ಅವರನ್ನು ಕಳುಹಿಸಿದ್ದಾರೆಎಂದುಬಾಂಬ್‍ಹಾಕಿದ್ದರು.
ಇದೇ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಸಂಸದರು ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಡಲಿದ್ದಾರೆ, ಕಾಂಗ್ರೆಸ್‍ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಸಲ್ಲದ ಹೇಳಿಕೆ ಕೊಟ್ಟಿದ್ದಾರೆ. ಸಂಸದರ ಬೆಂಬಲ ಪಕ್ಷಕ್ಕೆಇರಲಿದೆಎಂದರು.
ಬಿಜೆಪಿ ಮಾಜಿ ಮುಖ್ಯಮಂತ್ರಿಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದಅರವಿಂದ ಲಿಂಬಾವಳಿ,ಎಸ್.ಎ.ರಾಮದಾಸ್, ಎನ್.ಮಹೇಶ್ ಹಾಗು ಜೆಡಿಎಸ್ ಮುಖಂಡರಾದಮಾಜಿ ಸಚಿವಜಿ.ಟಿ.ದೇವೇಗೌಡ, ಶಾಸಕ ಎಂ.ಆರ್.ಮಂಜುನಾಥ್ ಸಾಥ್‍ನೀಡಿದರು.
ರೋಡ್‍ಷೋನಲ್ಲಿಜಿಲ್ಲಾ ಬಿಜೆಪಿ ಅಧ್ಯಕ್ಷಎಸ್. ನಿರಂಜನ್‍ಕುಮಾರ್, ಉಪಾಧ್ಯಕ್ಷರಾದ ಮಂಗಲ ಶಿವಕುಮಾರ್, ವೃಷಭೇಂದ್ರಪ್ಪ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರಎನ್. ಮಂಜುನಾಥ್, ಮಾಧ್ಯಮ ಪ್ರಮುಖ್ ವೀರೇಂದ್ರ ಸೇರಿದಂತೆ ಅನೇಕ ನೂರಾರುಜನಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.