ಸುನಿಲ್ ಬೋಸ್ ಪರ ಸಿಎಂ, ಡಿಸಿಎಂ ರೋಡ್ ಶೋ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.04:- ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಡಾ.ಜಿ ಪರಮೇಶ್ವರ್, ಕೆ.ವೆಂಕಟೇಶ್, ಸತೀಶ್ ಜಾರಕಿ ಹೋಳಿ, ಡಾ.ಹೆಚ್.ಸಿ ಮಹದೇವಪ್ಪ, ಯತೀಂದ್ರ, ಶಾಸಕ ಪುಟ್ಟರಂಗಶೆಟ್ಟಿ, ಎಆರ್‍ಕೃಷ್ಣಮೂರ್ತಿ ಸೇರಿದಂತೆ ಘಟಾನು ಘಟಿ ನಾಯಕರು ಭರ್ಜರಿರೋಡ್ μÉೂೀ ನಡೆಸಿದರು.
ಚಾಮರಾಜನಗರ ಲೋಕಸಭಾಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆಗೂ ಮುನ್ನ ಸಿಎಂ ಸಿದ್ದರಾಮಯ್ಯ ನಗರದಲ್ಲಿ ಭರ್ಜರಿರೋಡ್ ಶೋ ನಡೆಸಿದರು.
ಮೋದಿ, ಶಾ ವಿರುದ್ಧ ವಾಗ್ದಾಳಿ: ಚಾಮರಾಜನಗರದ ಭುವನೇಶ್ವರಿ ವೃತ್ತದಿಂದ ಬಿ.ರಾಚಯ್ಯಜೋಡಿ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ, ಗೃಹ ಸಚಿವಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಕೇವಲ ಸುಳ್ಳುಗಳನ್ನೇ ಹೇಳಲಿದ್ದು ಸಾಧನೆ ಏನು ಮಾಡಿಲ್ಲ. ಗೃಹ ಸಚಿವಅಮಿತ್ ಶಾ ಅವರು ಚನ್ನಪಟ್ಟಣಕ್ಕೆ ಬಂದು ರಾಜ್ಯದ ಸರ್ಕಾರದ ವಿರುದ್ಧ ಸುಳ್ಳಿನ ಸರಮಾಲೆಯನ್ನೇ ಹೇಳಿದ್ದಾರೆ.
ಬರ ಪರಿಹಾರಕ್ಕಾಗಿ ಆರಂಭದಲ್ಲೇ ಮನವಿ ಸಲ್ಲಿಸಿ 3.5 ತಿಂಗಳಾದರೂ ಹಣ ಬಿಡುಗಡೆ ಮಾಡದೇ ಈಗ ಮನವಿಯನ್ನೇ ಕೊಟ್ಟಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಹಿಂದಿಯಲ್ಲೇ ಡೈಲಾಗ್ ಹೊಡೆದು ಕಿಡಿಕಾರಿದರು.
ರಾಜ್ಯ, ದೇಶದ ತುಂಬಾ ಕಾಂಗ್ರೆಸ್ ಅಲೆ ಎದ್ದಿದೆ, ಚಾಮರಾಜನಗರದಲ್ಲಿ ಕಾಂಗ್ರೆಸ್ ಹುರುಪು ನೋಡುತ್ತಿದ್ದರೇ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಲಕ್ಷಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ನುಡಿದಂತೆ ನಡೆದ ಸರ್ಕಾರವಾಗಿದ್ದು ಕೊಟ್ಟ ಭರವಸೆ ಈಡೇರಿಸಿದ್ದೇವೆ, ಬಿಜೆಪಿಯನ್ನು ಸೋಲಿಸಿ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಈ ಜನಸಾಗರ ನೋಡಿದ್ರೆ ನಮ್ಮ ಅಭ್ಯರ್ಥಿ ಗೆಲುವಿನ ಸೂಚನೆ ನೀಡುತ್ತಿದೆ: ಈ ಜನಸಾಗರ ನೋಡಿದರೆ ಸುನಿಲ್ ಬೋಸ್ ಗೆಲುವಿನ ಸೂಚನೆ ನೀಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸಾವಿರಾರುಜನರು ಭಾಗವಹಿಸಿದ್ದರಿಂದ ಹರ್ಷಗೊಂಡ ಡಿಕೆಶಿ ಈ ಜನಸಾಗರ ನೋಡಿದ್ರೆ ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ನಾವೆಲ್ಲರೂ ಮಹದೇವಪ್ಪರನ್ನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬೇಕೆಂದು ತೀರ್ಮಾನ ಮಾಡಿದ್ದೆವು.ಇದೀಗ ಅವರ ಮಗನನ್ನಅಭ್ಯರ್ಥಿ ಮಾಡಿದ್ದೇವೆ. ಸುನಿಲ್ ಬೋಸ್ ಗೆ ನೀವೆಲ್ಲ ಆಶೀರ್ವಾದ ಮಾಡಬೇಕು. ಸುನಿಲ್ ಬೋಸ್ ನಮ್ಮ ಮಗ ಇದ್ದಾಗೆ. ಅವರನ್ನಗೆಲ್ಲಿಸಲು ನಾವು ಬಂದಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಹೆಸರನ್ನ ಬಳಸಿಕೊಂಡ ಕಾಂಗ್ರೆಸ್ : ನಮ್ಮ ಅಭ್ಯರ್ಥಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಆಶೀರ್ವಾದ ಪಡೆದು ಬಂದಿದ್ದಾರೆಎಂದು ಹೇಳುವ ಮೂಲಕ ದಲಿತ ಮತಗಳನ್ನ ಸೆಳೆಯಲು ಹಿರಿಯದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಹೆಸರು ಡಿಸಿಎಂ ಡಿಕೆಶಿ ಉಚ್ಛರಿಸಿದರು.
ಸಂಸದರ ಬೆಂಬಲ ಕಾಂಗ್ರೆಸ್‍ಗೆ ಹಾಲಿ ಬಿಜೆಪಿ ಸಂಸದ ವಿ .ಶ್ರೀನಿವಾಸಪ್ರಸಾದ್ ಅವರು ಸುನಿಲ್‍ಬೋಸ್‍ಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರಬೆಂಬಲ, ಅವರ ಹಿತೈಷಿಗಳ ಬೆಂಬಲಕೊಟ್ಟು ಚಾಮರಾಜನಗರಕ್ಕೆ ಸುನೀಲ್‍ಬೋಸ್ ಅವರನ್ನು ಕಳುಹಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಾಂಬ್‍ಹಾಕಿದ್ದಾರೆ.
ಪರೋಕ್ಷವಾಗಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್‍ಕಾಂಗ್ರೆಸ್ ಪರಇದ್ದಾರೆಎಂದು ಸಂದೇಶ ರವಾನಿಸಿದ್ದಾರೆ. ಈಗಾಗಲೇ ಪ್ರಸಾದ್ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಸಚಿವರಾದ ಮಾಹದೇವಪ್ಪ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ವೆಂಕಟೇಶ್ ಹಾಗೂ ಅಭ್ಯರ್ಥಿ ಸುನಿಲ್ ಬೋಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷರಾದ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸ್ವಾಮಿ, ಮಹಮದ್‍ಅಸ್ಗರ್ ಮುನ್ನಾ, ಸೇರಿದಂತೆ ಹಲವಾರು ಮುಖಂಡರು ರೋಡ್ ಷೋನಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನಿಲ್ ಬೋಸ್ ನಗರದಲ್ಲಿಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಅಪ್ಪನ ಬಳಿಕ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಗ ಸ್ಪರ್ಧೆ. 34 ವರ್ಷಗಳ ಹಿಂದೆ ಜಾ.ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಾದೇವಪ್ಪ- ಈಗ ಕಾಂಗ್ರೆಸ್‍ಅಭ್ಯರ್ಥಿಯಾಗಿ ಅವರ ಮಗ ಸುನಿಲ್ ಬೋಸ್ ಸ್ಪರ್ಧೆಮಾಡುತ್ತಿದ್ದಾರೆ.
ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ವೇಳೆ ಸಚಿವರಾದ ಜಿ.ಪರಮೇಶ್ವರ್,ವೆಂಕಟೇಶ್, ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಯತೀಂದ್ರ ಭಾಗಿಯಾಗಿದ್ದರು.