ಪಕ್ಷ ತೊರೆದರೆ ಜೆಡಿಎಸ್‌ಗೆ ತೊಂದರೆ ಇಲ್ಲ
ಚಿಕ್ಕಬಳ್ಳಾಪುರ,ಏ೪:ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ಕಾರ್ಯಕರ್ತರು ಮುಖಂಡರು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಜಾತ್ಯತೀತ ಜನತಾದಳವನ್ನು ತೊರೆದರೆ ಪಕ್ಷ ಎಂದಿಗೂ ನಿರ್ನಾಮ ಆಗುವುದಿಲ್ಲ ಜಾತ್ಯತೀತ ಜನತಾದಳ ಪಕ್ಷವನ್ನು ಕಟ್ಟಲು ನಾವು ಇದ್ದೇವೆ ಎಂದು ಜೆಡಿಎಸ್ ಮುಖಂಡ ಹಾಗೂ ಪಿ ಎಲ್ ಡಿ. ಬ್ಯಾಂಕ್ ನಿರ್ದೇಶಕ ಮುಕ್ತ ಮುನಿಯಪ್ಪ ಹೇಳಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷವು ಕಾರ್ಯಕರ್ತರು ಕಟ್ಟಿ ಬೆಳೆಸಿರುವ ಪಕ್ಷವಾಗಿದ್ದು ಕೆಲ ಮುಖಂಡರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೊರಟಿದ್ದಾರೆ ಇದರಿಂದ ಪಕ್ಷಕ್ಕೇ ಏನೂ ನಷ್ಟವಿಲ್ಲ ಪಕ್ಷವನ್ನ ಇನ್ನಷ್ಟು ಗಟ್ಟಿಯಾಗಿ ಕಟ್ಟಿ ಬೆಳೆಸುವ ಕಾರ್ಯೋನ್ಮುಖರಾಗುವುದಾಗಿ ಹೇಳಿದರು. ಯಾವುದೇ ಒಬ್ಬ ವ್ಯಕ್ತಿ ಪಕ್ಷ ಬಿಟ್ಟು ಹೊರಟರೆ ಆ ಪಕ್ಷದಲ್ಲಿರುವ ಸಕ್ರಿಯ ಕಾರ್ಯಕರ್ತರು ಅವರ ಹಿಂದೆ ಹೋಗುವುದಿಲ್ಲ ಬದಲಿಗೆ ಪಕ್ಷದಲ್ಲಿ ಇನ್ನಷ್ಟು ಗಟ್ಟಿಯಾಗಿ ತಳ ಹೂರುತ್ತಾರೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು ಮಾತನಾಡಿ ಇಂದು ಬುದುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಮತ್ತು ಮುಖಂಡರ ಬೃಹತ್ ಸಮಾವೇಶ ನಡೆಲಿದೆ ಈ ಸಮಾವೇಶಕ್ಕೆ ಸಹಸ್ರರ ಮಂದಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದ ಅವರು ಎನ್ ಡಿ ಅಭ್ಯರ್ಥಿ ಸುಧಾಕರ್ ಅವರನ್ನು ಈ ಸಭೆಗೆ ಆಹ್ವಾನಿಸಿ ಅವರಿಗೆ ನಮ್ಮ ಅಭಿಪ್ರಾಯ ತಿಳಿಸಿ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ. ಆರ್. ರೆಡ್ಡಿ ಮಾತನಾಡಿ, ೫೦ ರಿಂದ ೬೦ ವರ್ಷಗಳ ಕಾಲ ರಾಜಕಾರಣ ಮಾಡಿರುವ ದೇವೇಗೌಡ ಅವರ ಅನುಭವದಲ್ಲಿ ಜಾತ್ಯಾತೀತ ಜನತಾದಳದೊಳಗೆ ಬಿಜೆಪಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಇದೊಂದು ದೇಶಕ್ಕೆ ಶುಭ ಸೂಚಕವಾಗಿದೆ ಆಗಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜೊತೆ ನಮ್ಮ ರಾಜಕೀಯ ಜೀವನವನ್ನು ಗುರುತಿಸಿಕೊಳ್ಳುತ್ತೇವೆ ಎಂದರು
ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ನಾರಾಯಣಸ್ವಾಮಿ, ಪ್ರಭಾ ನಾರಾಯಣಗೌಡ ನಗರಸಭೆ ಮಾಜಿ ಸದಸ್ಯ ಕಿಸಾನ್ ಕೃಷ್ಣಪ್ಪ, ಶಿಲ್ಪಗೌಡ, ನಾರಾಯಣಸ್ವಾಮಿ ಪಾರಿಜಾತ ಗೌಡ , ಹೊಸಹುಡ್ಯ ನಾರಾಯಣಸ್ವಾಮಿ, ಅಕಿಲ್ ರೆಡ್ಡಿ ಸೇರಿ ಇತರರು ಇದ್ದರು