1 ಲಕ್ಷ 50 ಸಾವಿರಕ್ಕೆ ಬೀಜದ ಹೋರಿ ಮಾರಾಟಬರದ ನಡುವೆಯೂ ಗಗನಕ್ಕೇರಿದ ಜಾನುವಾರುಗಳ ದರ!
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಏ.4: ಮಳೆಯ ಅಭಾವದ ನಡುವೆ ಬೀಸಿದ ಬರ ಎಲ್ಲ ರೈತರಿಗೆ ಸಂಕಷ್ಟಕ್ಕೆ ಇಡು ಮಾಡಿದ್ದು ಇಂತಹ ಬರಗಾಲದ ಸಂದರ್ಬದಲ್ಲಿಯೂ ತಾಳಿಕೋಟೆಯ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆದ ಜಾನುವಾರುಗಳ ಜಾತ್ರೆಯಲ್ಲಿ ದನಗಳ ದರ ಗಗನಕ್ಕೇರಿದ್ದು ಮಾರಾಟಗಾರರ ನಡುವೆಯೂ ಕೊಳ್ಳುಗರ ಸಂಖ್ಯೆ ಇಳಿಮುಖಗೊಂಡಿದ್ದು ಒಂದು ಬೀಜದ ಹೋರಿಗೆ 1 ಲಕ್ಷ 50 ಸಾವಿರ ರೂ.ಗೆ ಮಾರಾಟವಾಗಿದೆ.
ಸತತ ಬರಗಾಲದ ಬವಣೆಗೆ ತುತ್ತಾಗುತ್ತಾ ಬಂದಿರುವ ಈ ಭಾಗದ ರೈತಾಪಿ ಜನತೆ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಾಕಾಣಿಕೆಯನ್ನು ಕಡಿಮೆಗೊಳಿಸುತ್ತಾ ಬಂದಿದ್ದಾರೆ ಇದರ ಮದ್ಯವೂ ಬರಗಾಲದ ಸಮಯದಲ್ಲಿ ಮೇವಿನ ಕೊರತೆಯನ್ನು ನೀಗಿಸಲಾಗದಕ್ಕೆ ಜಾನುವಾರುಗಳ ಸಂತೆಯತ್ತ ರೈತರು ಹೆಜ್ಜೆ ಇಡುತ್ತಿದ್ದು ಆದರೆ ಇಂದು ಮಾರಾಟವಾಗದಿದ್ದರೇನು ನಾಳೆ ಮಾರುತ್ತದೆ ಎಂಬ ರೈತರ ದೈರ್ಯದ ಮಾತುಗಳು ಜಾನುವಾರುಗಳ ದರ ಗಗನ್ನಕ್ಕೇರಲು ಕಾರಣವೆನ್ನಲಾಗುತ್ತಿದೆ.
ಸಾಂಭಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ 70 ಸಾವಿರ ರೂ.ಗೆ ಒಂದು ಜೋಡುತ್ತುಗಳಿಂದ 1 ಲಕ್ಷ 50 ಸಾವಿರದ ವರೆಗೆ ಜೋಡೆತ್ತುಗಳು ಮಾರಾಟವಾಗಿದ್ದು ಕಂಡುಬಂದಿತು ಬರಗಾಲದ ನಡುವೆ ದನಗಳ ದರ ಈ ಭಾರಿ ಕುಸಿಯಬಹುದು ಎಂಬ ಆಶಾಭಾವನೆಯಿಂದ ಕೊಂಡುಕೊಳ್ಳಲು ಆಗಮಿಸಿದ ಜನರಿಗೆ ನಿರಾಸೆಯುಂಟಾಗಿದ್ದು ಕಂಡುಬಂದಿತ್ತಲ್ಲದೇ ಕೆಲವು ಬಡ ರೈತರು ದರ ಏರಿಳಿತ ಮಾಡುವದರೊಂದಿಗೆ ತಾವು ತಂದಿದ್ದ ದನಗಳನ್ನು ಮಾರಾಟ ಮಾಡಿ ತೆರಳಿದರು. ಈ ದನಗಳ ಜಾತ್ರೆಯಲ್ಲಿ ಬ.ಬಾಗೇವಾಡಿ ತಾಲೂಕು ಒಳಗೊಂಡು ಮುದ್ದೇಬಿಹಾಳ, ದೇವರ ಹಿಪ್ಪರಗಿ, ಹುಣಸಗಿ, ತಾಲೂಕು ಒಳಗೊಂಡಂತೆ ಅನೇಕ ಭಾಗಗಳಿಂದ ಸಾವಿರಾರು ದನಗಳು ಈ ಜಾತ್ರೋತ್ಸವದಲ್ಲಿ ಭಾಗಿಯಾಗಿದ್ದವು.
ಹಗ್ಗದ ವ್ಯಾಪಾರವು ಕುಂಟಿತ
ಪ್ರತಿವರ್ಷ ಸಾಂಭಪ್ರಭು ಶರಣಮುತ್ಯಾರ ದನಗಳ ಜಾತ್ರೋತ್ಸವದಲ್ಲಿ ದನಗಳ ಶೃಂಗಾರಕ್ಕೆ ಸಂಬಂದಿಸಿದ ಹಗ್ಗ ಮತ್ತು ಗೆಜ್ಜೆ ನಾದದ ಸರಗಳ ವ್ಯಾಪಾರವು ಬರದಿಂದ ಸಾಗುತ್ತಿತ್ತು ಆದರೆ ಈ ಭಾರಿ ವ್ಯಾಪಾರದಲ್ಲಿ ಬಹಳಷ್ಟು ಕುಂಟಿತಗೊಂಡಿದ್ದು ಕಂಡುಬಂದಿತ್ತಲ್ಲದೇ ಕೊಂಡುಕೊಳ್ಳುವವರಿಗಿಂತ ಕೇವಲ ದರಗಳನ್ನು ವಿಚಾರಿಸುತ್ತಿರುವವರ ಸಂಖ್ಯೆಯೇ ಹೆಚ್ಚಿಗೆ ಕಂಡುಬಂದಿತು.
ಬಾರಕೋಲು 150 ರೂ. ಹಣಿಕಟ್ಟು 150 ರಿಂದ 250 ರೂ., ಹಿಡಿ ಹಗ್ಗ 170 ರೂ. ಜಡಿ, ಗೆಜ್ಜಿ ಬಾರ 30 ರೂ., ಕೊಳ್ಳಿನ ಬಾರ 150 ರೂ., ದಾಂಡ 120 ರೂ., ಗೆಜ್ಜಿ ಸರ 200 ರೂ. ಜಡಿ, ಗುಮರಿ 2 ಸಾವಿರ ರೂ.ಗೆ.ಜೋಡಿ, ಜಟಗಿ 200 ರೂ. ಜಡಿ, ಸರಪಳಿ 1 ಸಾವಿರ ರೂ. ಜೋಡಿ, ಹಿತಾಳಿ ಗಂಟಿ 250 ರೂ., ಚೈನಾ ಸಟ್ ಸರ 150 ರೂ., ಮೊಗಡ 50 ರೂ., ಹಗ್ಗ 150 ರೂ. ಕೀಲೋ, ಮೊಗದಾಣಿ 25 ರೂ., ರೇಶ್ಮೀ ಮೊಗದಾಣಿ 50 ರೂ., ವಾರಯ ಮಿಟಿ 200 ರೂ. ಕೀಲೋ, ಈ ರೀತಿ ಕಳೆದ ಭಾರಿಗಿಂತ ಶೇ.20 ರಷ್ಟು ದರವು ಹೆಚ್ಚಳವಾಗಿತ್ತಲ್ಲದೇ ದನಗಳ ಸಂಖ್ಯೆ ಹೆಚ್ಚಳವಾಗಿದ್ದರೂ ಕೂಡಾ ವ್ಯಾಪಾತವು ಕುಂಟಿತವಾಗಿದ್ದು ಕಂಡು ಬಂದಿತು.
ದನಗಳ ಜಾತ್ರೋತ್ಸವದಲ್ಲಿ ದನಗಳಿಗೆ ಮತ್ತು ರೈತಾಪಿ ಜನತೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಾತ್ರಾ ಉತ್ಸವ ಕಮಿಟಿಯ ವತಿಯಿಂದ ಕೈಗೊಳ್ಳಲಾಗಿತ್ತು.
ಇದ್ದು ಇಲ್ಲದಂತಾದ ಎಪಿಎಂಸಿ