ಶ್ರೀ ಶರಣಮುತ್ಯಾರ ರಥದ ಕಳಸ ಇಳಿಸುವ ಕಾರ್ಯಕ್ರಮ
ತಾಳಿಕೋಟೆ:ಏ.4: ಪಟ್ಟಣದ ಆರಾಧ್ಯ ದೇವರಾದ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆದ ರಥದ ಕಳಸ ಇಳಿಸುವ ಕಾರ್ಯಕ್ರಮವು ಬುಧವಾರರಂದು ಶ್ರೀ ಶರಣರ ಮಠದ ಶ್ರೀ ಬಸಣ್ಣ ಶರಣರು, ಶ್ರೀ ಶರಣಪ್ಪ ಶರಣರ ನೇತೃತ್ವದಲ್ಲಿ ಜರುಗಿತು.
ರಥದ ಕಳಸ ಇಳಿಸುವ ಕಾರ್ಯಕ್ರಮದ ಅಂಗವಾಗಿ ಶ್ರೀ ಶರಣಮುತ್ಯಾರ ಕತೃಗದ್ದುಗೆಗೆ ಮಹಾಭಿಷೇಕ, ಬಿಲ್ವರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ನಂತರ ರಥಕ್ಕೆ ಮಹಾ ಪೂಜೆ ನೆರವೇರಿಸಿ ವಿವಿಧ ವಾದ್ಯಗಳೊಂದಿಗೆ ಶ್ರೀ ಶರಣಮುತ್ಯಾರ ಜೈಕಾರದೊಂದಿಗೆ ರಥದ ಕಳಸ ಇಳಿಸುವದರೊಂದಿಗೆ ಜಾತ್ರೋತ್ಸವವನ್ನು ಸಂಪನ್ನಗೊಳಿಸಲಾಯಿತು.
ಈ ಸಮಯದಲ್ಲಿ ಮಲ್ಲಣ್ಣ ಶರಣರ, ಸಿದ್ದಣ್ಣ ಶರಣರ, ಗುರುಲಿಂಗಪ್ಪ ಸಜ್ಜನ, ತಿಪ್ಪಣ್ಣ ಸಜ್ಜನ, ಸಂಗಮೇಶ ಶರಣರ, ಸಿದ್ದನಗೌಡ ಪೊಲೀಸ್‍ಪಾಟೀಲ, ಈರಣ್ಣ ಶರಣರ, ಪ್ರಕಾಶ ಸಜ್ಜನ, ಸಂಗಣ್ಣ ಹೂಗಾರ, ಸಿ.ವ್ಹಿ.ಚೋಂಡಿಪಾಟೀಲ, ವಿಜಯಕುಮಾರ ಹಿರೇಮಠ, ಅಶೋಕ ಸಜ್ಜನ, ಶಾಂತಪ್ಪ ಕರಿಭಾವಿ, ಶಾಂತಗೌಡ ಬಿರಾದಾರ, ಹಣಮಂತ್ರಾಯ ಹೊಸಮನಿ, ಮಹಾಂತೇಶ ಯಾಳಗಿ, ಶ್ರೀಕಾಂತ ಕದ್ನಳ್ಳಿ, ದೇವೇಂದ್ರಪ್ಪ ಯಾಳಗಿ, ಬಸನಗೌಡ ಪಾಟೀಲ, ಸಿದ್ದಣ್ಣ ಯಾಳಗಿ, ಶರಣಪ್ಪ ಧರಿ, ಚೇತನ ಸಜ್ಜನ, ಗಂಗಪ್ಪ ಸಜ್ಜನ, ಭೀಮಣ್ಣ ಇಂಗಳಗಿ, ಮಲ್ಲಣ್ಣ ಇಂಗಳಗಿ, ಶೇಖು ಚೊಂಡಿ ಪಾಟೀಲ, ಪರಮಣ್ಣ ಛಾಂದಕೋಟಿ, ಬರಮಣ್ಣ ಸಜ್ಜನ, ಸಚೀನ ನಾಲತವಾಡ, ಸೋಮು ಸಜ್ಜನ, ಮೊದಲಾದವರು ಇದ್ದರು.