ದ್ವಿ ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊಂಡಾಗ ಅಬಕಾರಿ ದಾಳಿ
ಯಾದಗಿರಿ : ಏ.4: : ಅಬಕಾರಿ ದಾಳಿ ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ, 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.06, 2024ರ ಏಪ್ರಿಲ್ 03 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ಅವರು ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ರವರ ಮಾರ್ಗದರ್ಶನದಲ್ಲಿ ಯಾದಗಿರಿ ಪಟ್ಟಣದ ಗಂಜ ಏರಿಯಾದಲ್ಲಿ ಶ್ರೀಶೈಲ್ ಒಡೆಯರ್ ಅಬಕಾರಿ ನಿರೀಕ್ಷಕರು, ಶ್ರೀ ಬಸವರಾಜ ರಾಜಣ್ಣವರ ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಛೇರಿ ಯಾದಗಿರಿ, ಅಬಕಾರಿ ಮುಖ್ಯ ಪೇದೆಯಾದ ಶ್ರೀ ಅನಿಲ್ ಕುಮಾರ, ಅಬಕಾರಿ ಪೇದೆಯಾದ ಶ್ರೀ ಪ್ರವೀಣಕುಮಾರ, ವಾಹನ ಚಾಲಕರಾದ ಶ್ರೀ ದೊಂಡಿಬಾ ಜಾಧವ ಮತ್ತು ಗೃಹ ರಕ್ಷಕ ಸಿಬ್ಬಂದಿಯಾದ ಅರ್ಜುನ ಕುಮಾರ ಮತ್ತು ಶಿವುಕುಮಾರ, ಡಿಸಿಇಐಬಿ ಕಛೇರಿ ಯಾದಗಿರಿ ರವರು ಗಸ್ತು ಮಾಡುತ್ತಿರುವ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಯಾದಗಿರಿ ಪಟ್ಟಣದಿಂದ ಶಹಾಪುರ ಪಟ್ಟಣದ ಕಡೆಗೆ ಹೊಗುವ ಮಾರ್ಗದಲ್ಲಿರುವ ರೆಲ್ವೇ ಸೇತುವೆಯ ಮೇಲೆ ಅಕ್ರಮವಾಗಿ ದ್ವಿ ಚಕ್ರ ಹಿರೋ ಸ್ಪ್ಲೇಂಡರ್ ಪ್ಲಸ್ ವಾಹನ ನೊಂದಣಿ ಸಂ.ಏಂ-33-U-0827 ನೇದ್ದರಲ್ಲಿ ಸುರೇಶ ತಂದೆ ಬಸವರಾಜ ಸಾ. ಉಳ್ಳೇಸುಗೂರ ಗ್ರಾಮ ಎಂಬ ಆರೋಪಿತನು 90mಟ ನ x 192 ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು (ಒಟ್ಟು 17.280 ಲೀ ಮದ್ಯ) ಮಾರಾಟ ಮಾಡುವ ಉದ್ದೇಶದಿಂದ ತನ್ನ ದ್ವಿ ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊಂಡಾಗ ವಶಪಡಿಸಿಕೊಂಡಿದ್ದು ಆರೋಪಿತನನ್ನು ಬಂಧಿಸಿ ಘೋರ ಪ್ರಕರಣವನ್ನು ಬಸವರಾಜ ಬಿ ರಾಜಣ್ಣವರ ಅಬಕಾರಿ ಉಪ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆ ಅವರು ಪ್ರಕರಣವನ್ನು ದಾಖಲಿಸಿದ್ದು ಅವುಗಳ ಅಂದಾಜು ಮೌಲ್ಯ 93680 ಆಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.