ಒಂದು ದೇಶ ಒಂದು ಚುನಾವಣೆ ತರಾತುರಿ ನಿರ್ಧಾರ: ಎಂ.ಬಿ.ಪಾಟೀಲ
ವಿಜಯಪುರ, ಸೆ.19- ಕೇಂದ್ರ ಸರ್ಕಾರದ ಒಂದು ದೇಶ ಒಂದು ಚುನಾವಣೆ ತರಾತುರಿ ನಿರ್ಧಾರ. ಇದು ರಾಜಕೀಯ ಗಿಮಿಕ್ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ರಾತ್ರಿ ವಿಜಯಪುರದ ತಮ್ಮ ನಿವಾಸದಲ್ಲಿ ಸಚಿವ ಎಂ.ಬಿ. ಪಾಟೀಲ ಸುದ್ದಿಗಾರರ ಜೊತೆಗೆ ಮಾತನಾಡಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಪರಿಸ್ಥಿತಿ ಬೇರೆ ಇತ್ತು. ಆದರೆ ಈಗ ಆ ಸ್ಥಿತಿ ಇಲ್ಲ. ಇದನ್ನು ವೈಜ್ಞಾನಿಕವಾಗಿ ಯಾವ ರೀತಿ ಮಾಡಬೇಕಾಗುತ್ತದೆ ಅನ್ನುವ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಇದರಿಂದ ಕೆಲವರ ಅವಧಿ ವಿಸ್ತರಿಸಬೇಕಾಗುತ್ತದೆ. ಹಲವರ ಅವಧಿ ಮೊಟಕುಗೊಳಿಸಬೇಕಾಗುತ್ತದೆ.
ಇದು ತರಾತುರಿಯ ಪ್ರಚಾರಕ್ಕಾಗಿ ಮಾಡಿದ ನಿರ್ಧಾರ ಎಂದರು.
ಎಲ್ಲ ಪಕ್ಷದವರ ಜೊತೆ ಮಾತನಾಡಿ, ಚರ್ಚೆ ಮಾಡಿ ನಿರ್ಣಯ ಮಾಡಿದ್ದರೆ ಸೂಕ್ತವಾಗುತ್ತಿತ್ತು. ಹೀಗಾದರೆ ಇದು ಕೇವಲ ರಾಜಕೀಯ ಘೋಷಣೆಗೆ ಮಾತ್ರ ಸೀಮಿತವಾಗುತ್ತದೆ. ಇದನ್ನು ಸರ್ವಾನುಮತದಿಂದ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
5 ವರ್ಷದ ಅವಧಿಯನ್ನು ಮೊಟಕುಗೊಳಿಸಲು ಇವರಿಗೆ ಪವರ್ ಇದೆನಾ? 5 ವರ್ಷದ ಅವಧಿ ಮುಂದುವರೆಸಲು ಇವರಿಗೆ ಪವರ್ ಇದೆನಾ? ಎಂದೂ ಅವರು ಪ್ರಶ್ನಿಸಿದರು.
ಇದಕ್ಕೆ ಬೇಕಾಗುವ ಇನ್ಫಾಸ್ಟ್ರಕ್ಚರ್ ಇರಬೇಕು.
ಆರ್ಮಿ, ವಿವಿ ಮಷಿನ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇವರ ಬಳಿ ಎಲ್ಲವೂ ಇದೆಯಾ? ಎಂದು ಪ್ರಶ್ನಿಸಿದ ಸಚಿವ ಎಂ.ಬಿ. ಪಾಟೀಲ ಇದು ಜಾರಿಗೆ ಬರುವುದು ಅಸಾಧ್ಯ.ಇದೊಂದು ಪಾಲಿಟಿಕಲ್ ಗಿಮಿಕ್ ಅಷ್ಟೆ ಎಂದರು.