ಗಾಳಿಯಲ್ಲಿ ಗುಂಡು ಪ್ರಕರಣ: ಇಬ್ಬರ ವಿರುದ್ಧ ಎಫ್‍ಐಆರ್
ವಿಜಯಪುರ,ಸೆ.19: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆ. 14ರಂದು ಗಣೇಶ ವಿಸರ್ಜನೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿದೆ.
ಪ್ರಶಾಂತ ಬಿರಾದಾರ ಅನುಮತಿ ಪಡೆದ ಪಿಸ್ತೂಲ್ ಹೊಂದಿದ್ದ. ಮೊದಲು ಪ್ರಶಾಂತ ಬಿರಾದಾರ ಗಾಳಿಯಲ್ಲಿ ಫೈರಿಂಗ್ ಮಾಡಿದ್ದ. ಬಳಿಕ ಮುದುಕಪ್ಪ ಎಂಬಾತ ಪ್ರಶಾಂತ ಬಿರಾದಾರನ ಪಿಸ್ತೂಲ್ ಪಡೆದು ಗಾಳಿಯಲ್ಲಿ ಫೈರಿಂಗ್ ಮಾಡಿದ್ದ. ಮುದುಕಪ್ಪ ಗಾಳಿಯಲ್ಲಿ ಫೈರಿಂಗ್ ಮಾಡುವ ವಿಡಿಯೋ ಸೆರೆ ಸಿಕ್ಕಿದೆ.
ಗಾಳಿಯಲ್ಲಿ ಫೈರಿಂಗ್ ಬಳಿಕ ಮುದುಕಪ್ಪ ಪ್ರಶಾಂತನಿಗೆ ಪಿಸ್ತೂಲ್ ಕೊಡುವ ದೃಶ್ಯವೂ ಕೂಡಾ ವೈರಲ್ ಆಗಿದೆ.
ಪೆÇಲೀಸರು ಈ ಬಗ್ಗೆ ಇಬ್ಬರ ವಿರುದ್ಧ ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಿಂದಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.