ಬಿಎಲ್‍ಡಿಇ ಡಾ. ರಾಘವೇಂದ್ರ, ಡಾ. ಕುಸಾಲಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ
ವಿಜಯಪುರ,ಸೆ.19: ನಗರದ ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಶರೀರ ಶಾಸ್ತ್ರ ವಿಜ್ಞಾನದ ವಿಭಾಗದ ಪ್ರಾಧ್ಯಾಪಕ ಹಾಗೂ ಡಿಸ್ಟಿಂಗ್ವಿಷ ಚೇರ್ ಪ್ರೊಫೆಸರ್ ಡಾ. ಕುಸಾಲ ದಾಸ ಅವರು ಪ್ರಸಕ್ತ 2024ನೇ ವರ್ಷದ ವಿಶ್ವದ ಉನ್ನತ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಔಷಧ ವಿಜ್ಞಾನ, ಶರೀರಶಾಸ್ತ್ರ ಹಾಗೂ ಪಾಲಿಮ ಕ್ರ್ಷೇತ್ರದಲ್ಲಿನ ಸಂಶೋಧನೆಗಾಗಿ ಇಬ್ಬರೂ ಸಂಶೋಧಕರಿಗೆ ಈ ವರ್ಷದ ವಿಶ್ವದ ಉನ್ನತ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಅಮೆರಿಕದ ಸ್ಟ್ಯಾನಫೆÇೀರ್ಡ್ ವಿಶ್ವವಿದ್ಯಾಲಯ ಹಾಗೂ ನೆದರಲ್ಯಾಂಡ್‍ನ ಎಲ್ಸವಿಯರ್ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ ಶ್ರೇಷ್ಠ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ನೀಡುತ್ತದೆ.
ಡಾ. ರಾಘವೇಂದ್ರ ಕುಲಕರ್ಣಿ ಸತತ 4ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಭಾರತದ ಸಂಶೋಧಕರ ಪೈಕಿ 20ನೇ ಸ್ಥಾನ ಮತ್ತು ವಿಶ್ವದಲ್ಲಿ 146ನೇ ಸ್ಥಾನ ಪಡೆದಿದ್ದಾರೆ. ಡಾ. ರಾಘವೇಂದ್ರ ಕುಲಕರ್ಣಿ ಅವರು 130 ಸಂಶೋಧನಾ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, 10 ಪೇಟೆಂಟ್‍ಗಳನ್ನೂ ಪಡೆದಿದ್ದಾರೆ ಮತ್ತು ಇವರು ನಡೆಸಿದ ಸಂಶೋಧನೆಗಾಗಿ ರೂ. 97 ಲಕ್ಷ ಅನುದಾನವೂ ಒಲಿದು ಬಂದಿದೆ.
ಡಾ. ಕುಸಾಲ ದಾಸ ಸತತ 2ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರ ಪೈಕಿ 229ನೇ ಸ್ಥಾನ ಹಾಗೂ ವಿಶ್ವದಲ್ಲಿ 2730ನೇ ಸ್ಥಾನ ಪಡೆದಿದ್ದಾರೆ. ಅವರು 146 ಸಂಶೋಧನಾ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, 03 ಪೇಟೆಂಟ್‍ಗಳನ್ನೂ ಪಡೆದಿದ್ದಾರೆ ಹಾಗೂ ಸಂಶೋಧನೆಗಾಗಿ ರೂ. 40 ಲಕ್ಷ ಅನುದಾನವನ್ನೂ ಪಡೆದುಕೊಂಡಿದ್ದಾರೆ.
ಇವರ ಸಾಧನೆಗೆ ಬಿ. ಎಲ್. ಡಿ. ಇ. ಡೀಮ್ಟ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ. ಬಿ. ಪಾಟೀಲ, ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ ಹಾಗೂ ಅಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.