ಸಂಭ್ರಮದಿಂದ ವಿಶ್ವಕರ್ಮ ಜಯಂತಿ ಆಚರಣೆ
ತಾಳಿಕೋಟೆ:ಸೆ.19: ಪಟ್ಟಣದ ವಿಶ್ವಕರ್ಮ ಸಮಾಜ ಬಾಂದವರು ಪಟ್ಟಣದ ಭಗವಾನ್ ವಿಶ್ವಕರ್ಮ ವೃತ್ತದಲ್ಲಿ ವಿಶ್ವಕರ್ಮರ ಜಯಂತ್ಯೋತ್ಸವವನ್ನು ಅತ್ಯಂತ ಭಕ್ತಿಭಾವದೊಂದಿಗೆ ಆಚರಿಸಿದರು.
ವಿಶ್ವಕರ್ಮರ ಭಾವಚಿತ್ರಕ್ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಅಲ್ಲದೇ ಸಮಾಜದ ಮುಖಂಡರುಗಳು ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಗೌರವಿಸಿದರು.
ಈ ಸಮಯದಲ್ಲಿ ಶ್ರೀನಿವಾಸ ಸೋನಾರ ಅವರು ಮಾತನಾಡಿ ವಿಶ್ವಕರ್ಮರು ದೇಶದ ಪ್ರಗತಿಗೆ ಮತ್ತು ಸಮಾಜದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ವಿಶ್ವಕರ್ಮರು ವಿಶ್ವದ ಮೂಲಸೃಷ್ಠಿಕರ್ತರು, ಅಲ್ಲದೇ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಕಾಶ್ಮೀರದ ವರೆಗೆ ಅರಬಿ ಸಮುದ್ರದಿಂದ ಹಿಡಿದು ಬಂಗಾಳಕೊಲ್ಲಿಯವರೆಗೆ ಎಲ್ಲ ದೇವಸ್ಥಾನಗಳ ಮೂರ್ತಿಗಳನ್ನು ಸೃಷ್ಠಿಸಿದ ಶಿಲ್ಪಿಗಳಾಗಿದ್ದಾರೆ, ನಿಸ್ವಾರ್ಥ ಮನೋಭಾವದ ತ್ಯಾಗಮೂರ್ತಿಗಳಾಗಿದ್ದು ದೇಶದ ಪ್ರಗತಿಗೆ ಮತ್ತು ಸಮಾಜದ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ವಿಶ್ವಕರ್ಮರು ಜನರ ಹಿತ ಸರಂಕ್ಷಣೆಗೆ ಸದಾ ಆಲೋಚಿಸುವ ಮೂಲಕ ಪ್ರಕೃತಿಯ ಸಂಪತ್ತನ್ನು ಎಲ್ಲರಿಗೂ ಸಮಪಾಲು ಹಂಚಿದವರು ಆಗಿದ್ದಾರೆಂದು ಹೇಳಿದ ಅವರು ಕಲೆಯು ಯಾರ ಸ್ವತಃಲ್ಲಾ ಅದನ್ನು ಸೇಷ್ಠಿಸಿ ಎಲ್ಲರ ಕೈಗೆ ನೀಡಿದ್ದಾರೆ ಅಂತಹ ಕಲೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ಎಲ್ಲರೂ ಮಾಡಬೇಕೆಂದರು.
ಈ ಸಮಯದಲ್ಲಿ ಸಮಾಜದ ಮುಖಂಡರುಗಳಾದ ಮುದಕಪ್ಪ ಬಡಿಗೇರ, ಕಾಶಿನಾಥ ಕಂಬಾರ, ಉದಯಕುಮಾರ ಸಓನಾರ, ಶ್ರೀನಿವಾಸ ಪತ್ತಾರ, ಸುನೀಲ್ ವರದಪ್ಪನವರ, ವಿವೇಕ ಬಡಿಗೇರ, ಬಸವರಾಜ ಬಡಿಗೇರ, ಕಿರಣ ಬಡಿಗೇರ, ಮಾನಪ್ಪ ಪತ್ತಾರ, ವಿನಾಯಕ ಪತ್ತಾರ, ಮೌನೇಶ ಪತ್ತಾರ ಜಗದೀಶ ಪತ್ತಾರ, ಶರಣಪ್ಪ ಪತ್ತಾರ, ಕುಮಾರ ಬಡಿಗೇರ ಮೊದಲಾದವರು ಇದ್ದರು.