ನಮ್ಮೊಳಗಿನ ದುಷ್ಟ ಶಕ್ತಿಗಳ ನಿಗ್ರಹವೇ ನವರಾತ್ರಿ ಪೂಜೆ : ಸದಾಶಿವ ಶ್ರೀ
ಕಲಬುರಗಿ:ಅ.04: ನಮ್ಮೊಳಗಿನ ಕೆಟ್ಟ ಗುಣಗಳನ್ನು ಬಿಡುವುದು ಮತ್ತು ದುಷ್ಟ ಶಕ್ತಿಗಳನ್ನು ನಿಗ್ರಹಿಸುವುದೇ ನವರಾತ್ರಿ ದುರ್ಗೆ ಯ ಪೂಜೆಯಾಗಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಸೇಡಂ ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ದಸರಾ ಉತ್ಸವ ಸಮಿತಿ ಹಾಗೂ ಶ್ರೀ ಪಂಚಲಿಂಗೇಶ್ವರ ದೇವಾಲಯ ಭಕ್ತ ಮಂಡಳಿ ಸಹಯೋಗದಲ್ಲಿ ನಡೆದ 43 ನೇ ವರ್ಷದ ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ನೇತೃತ್ವ ವಹಿಸಿ ಆರ್ಶೀರ್ವಚನ ನೀಡಿದ ಅವರು, ನಮ್ಮೊಳಗಿನ ಕೆಟ್ಟ ಗುಣ ಬಿಡುವುದು. ದುಷ್ಟ ಶಕ್ತಿ ಅನ್ನೋದು ನಮ್ಮೊಳಗಿದೆ. ಅವಗುಣಗಳನ್ನು ಬಿಟ್ಟು ಶಿವಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅವಗುಣಗಳನ್ನು ತ್ಯಜಿಸಬೇಕು ಎಂದರೆ, ಶರಣರ ವಚನಗಳನ್ನು, ದಾಸರ ಕೀರ್ತ ನೆಗಳನ್ನು ಹಾಗೂ ದೇವಿಯ ಪಾರಾಯಣದ ಸ್ತುತಿಗಳು ಕಿವಿಗೆ ಬೀಳಬೇಕು. ಆ ಕಾರಣಕ್ಕೆ ನವರಾತ್ರಿ ಸಂದರ್ಭದಲ್ಲಿ ಪ್ರವಚನ ದಂತ ಧಾರ್ಮಿಕ ಉಪನ್ಯಾಸಗಳನ್ನು ಆಯೋಜಿಸ ಲಾಗುತ್ತದೆ. ಎಂದು ಅವರು ಹೇಳಿದರು.
ಮನುಷ್ಯನಿಗೆ ಗರ್ವ ಬರಬಾರದು. ಸೊಕ್ಕು, ಗರ್ವ, ಅಹಂಕಾರ ಬಂದರೆ, ಅವನ ಅವನತಿ ಶುರುವಾಗಿದೆ ಎಂದೇ ಅರ್ಥ. ಈ ಕಾಲಘಟ್ಟದಲ್ಲಿ ಮನುಷ್ಯರ ನಡುವಿನ ಗೌರವ ನಶಿಸುತ್ತಿದೆ. ಜೀವನ ಪ್ರೀತಿಯು ಕಡಿಮೆಯಾಗಿದೆ.
ಒಂಬತ್ತು ತಿಂಗಳು ಹೆತ್ತು, ಸಾಕಿ ಸಲುಹಿದ ತಾಯಿಗೆ ಮಕ್ಕಳಾದವರು ಚೆಂದಾಗಿ ನೋಡಿಕೊಳ್ಳಬೇಕು. ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದು. ತಾಯಿ ಸೇವೆಯನ್ನು ಎಷ್ಟೇ ಮಾಡಿದರೂ ತಾಯಿ ಋಣ ತೀರಿಸಲು ಆಗುವುದಿಲ್ಲ. ತಂದೆ ತಾಯಿಯರನ್ನು ಜೋಪಾನ ಮಾಡಿದರೆ ಬದುಕು ಶುದ್ಧವಾಗುತ್ತದೆ. ದೇವಾಲಯ ದಲ್ಲಿರುವ ಅಂಬಾಭವಾನಿಯೇ ತಾಯಿ ಎಂದು ಮಾರ್ಮಿಕವಾಗಿ ಹೇಳಿದರು.
ಪುರಾತನ ಮಠವಾಗಿರುವ ಶ್ರೀ ಶಿವಶಂಕರ ಮಠದ 9ನೇ ಪೀಠಾಧಿಪತಿಗಳಾದ ಪೂಜ್ಯ ಷ.ಬ್ರ.ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಶ್ರೀ ಪಂಚಲಿಂಗೇಶ್ವರ ದೇವಾಲಯ ಭಕ್ತ ಮಂಡಳಿಯ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಪಂಚಲಿಂಗೇಶ್ವರ ದೇವಾಲಯ ಭಕ್ತ ಮಂಡಳಿಯ ಉಪಾಧ್ಯಕ್ಷ ಸುಧಾಕರ ಕುಲಕರ್ಣಿ, ಉದ್ದಿಮೆದಾರ ಅಂಬೋಜಿ ಕದಂ ಹಾಗೂ ಶ್ರೀನಿವಾಸ ಟಿ.ಮೇದಾ ಮುಖ್ಯ ಅತಿಥಿಗಳಾಗಿದ್ದರು. ರಾಘವೇಂದ್ರ ರೆಡ್ಡಿ ಅಗನೂರ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಸಂತೋಷ ಕುಲಕರ್ಣಿ, ನಾಗಭೂಷಣ ಯಲಗಾರ, ಶಂಕರ ಬೋಳದ, ನಾಗರೆಡ್ಡಿ ತುಳೇರ, ಮುನಿಯಪ್ಪ ಇತರರಿದ್ದರು.
5 ಸಾವಿರ ಎಕರೆ ಜಮೀನಿನ ಪೂಜ್ಯರು ದಿನಾ ಕಣ್ಣೀರಾಕ್ತಾರೆ
ಪ್ರವಚನದ ನಡುವೆ ವೃದ್ಧಾಶ್ರಮದ ಬಗ್ಗೆ ಸಂಗತಿಯೊಂದನ್ನು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕೊಪ್ಪಳದ ಒಂದು ಮಠಕ್ಕೆ 5 ಸಾವಿರ ಎಕರೆ ಜಮೀನಿದೆ. ಬಹು ದೊಡ್ಡ ಆಸ್ತಿಯಿದೆ. ಯಾವುದಕ್ಕೂ ಕಡಿಮೆಯಿಲ್ಲ. ಬೃಹತ್ ಮಠವಿದೆ. ಲಕ್ಷಾಂತರ ಭಕ್ತರು ಇದ್ದಾರೆ. ಮಠದ ಏಳಿಗೆಗೆ ದೇಣಿಗೆ ಕೊಡಲು ಭಕ್ತರು ಸಾಲು ನಿಂತಿದ್ದಾರೆ. ಆ ಸಾಲು ಮೂರು ವರ್ಷವಾದರೂ ಮುಗಿಯುವುದಿಲ್ಲ. ಆದರೂ ಆ ಮಠದ ಪೂಜ್ಯರು ಪ್ರತಿ ದಿನವೂ ಕಣ್ಣೀರು ಹಾಕುತ್ತಾರೆ.
ತಮ್ಮ ಮಠದ ಅಡಿಯಲ್ಲಿ ವೃದ್ಧಾಶ್ರಮವೊಂದನ್ನು ಮಾಡಿದ್ದಾರೆ. ಅಲ್ಲಿ ಸುಮಾರು 150 ಜನ ವಯಸ್ಸಾದವರು ಇದ್ದರು. ಕಳೆದ ಅನೇಕ ವರ್ಷಗಳಲ್ಲಿ 140 ಜನ ವೃದ್ಧಾಶ್ರಮದಿಂದ ಅವರವರ ಮಕ್ಕಳನ್ನು ಹುಡುಕಿ, ಅವರಲ್ಲಿಗೆ ಕಳಿಸಿದ್ದಾರೆ. ಮಕ್ಕಳ ಜೊತೆ ವೃದ್ಧಾಶ್ರಮದಲ್ಲಿ ತಂದೆ ತಾಯಿಂದಿರುವ ಇಗ ಆರಾಮ ಆಗಿದ್ದಾರೆ. 140 ಜನರನ್ನು ಮಕ್ಕಳೊಂದಿಗೆ ಇರುವಂತೆ ನೋಡಿಕೊಂಡಿದ್ದಕ್ಕೆ ಖುಷಿ ಪಡಬೇಕಾದ ಶ್ರೀಮಠದ ಪೂಜ್ಯರು ದಿನವೂ ಅಳುತ್ತಾರೆ. ಹೀಗೆ ದಿನವೂ ಕಣ್ಣೀರು ಹಾಕುವ ಆ ಪೂಜ್ಯರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಕೇಳಿ ಬೆರಗಾಯಿತು.
150 ಜನರ ಪೈಕಿ 140 ಜನರನ್ನು ಮತ್ತೆ ಅವರ ಮನೆಗಳಿಗೆ ಕಳಿಸಿ, ಮಕ್ಕಳೊಂದಿಗೆ ಮೊಮ್ಮಕ್ಕಳೊಂದಿಗೆ ಆರಾಮಿದ್ದಾರೆ. ಆದರೆ, ಇನ್ನೂ ಉಳಿದಿರುವ 10 ಜನರನ್ನು ಅವರ ಮಕ್ಕಳಲ್ಲಿಗೆ ಕಳಿಸುವುದಕ್ಕೆ ಆಗುತ್ತಿಲ್ಲ. ಅವರ ಮಕ್ಕಳು, ಸಂಬಂಧಿಕರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಅವರಿಗಾಗಿ ಕಷ್ಟ ಪಡುತ್ತಿದ್ದರೂ ಅವರನ್ನು ಕಳಿಸದೇ ಇರುವುದಕ್ಕೆ ದುಖಃ ಆಗುತ್ತಿದೆ. ವೃದ್ಧಾಶ್ರಮಗಳು ಇರಲೇಬಾರದು ಎಂಬ ತಮ್ಮೊಳಗಿನ ಮನೋಭೂಮಿಕೆಯನ್ನು ಹೊರಹಾಕಿದರು.