ಕಾಳನೂರ ತಾಂಡಾ: ರತ್ನಿದಾದಿ ದೇವಿ ಗುಡಿಯ ಹುಂಡಿ, ಬಂಗಾರ ಕಳವು
ಕಲಬುರಗಿ,ಏ.3-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳನೂರ ತಾಂಡಾದಲ್ಲಿರುವ ರತ್ನಿದಾದಿ ದೇವಿ ಗುಡಿಯ ಮುಖ್ಯ ಗೇಟ್ ಬೀಗ ಮುರಿದ ಕಳ್ಳರು ದೇವಸ್ಥಾನದ ಹುಂಡಿಯಲ್ಲಿದ್ದ 1 ಲಕ್ಷ ನಗದು ಸೇರಿ 5.20 ಲಕ್ಷ ರೂ.ಮೌಲ್ಯದ ನಗನಾಣ್ಯವನ್ನು ದೋಚಿಕೊಂಡು ಹೋಗಿದ್ದಾರೆ.
ದೇವಸ್ಥಾನದ ಮುಖ್ಯ ಗೇಟ್ ಬೀಗ ಮುರಿದ ಕಳ್ಳರು ದೇವಸ್ಥಾನದ ಹುಂಡಿಯೊಳಗಿದ್ದ 1 ಲಕ್ಷ ರೂ.ನಗದು ಮತ್ತು ರತ್ನಿದಾದಿ ದೇವಿ ಮೂರ್ತಿಯ ಮೈಮೇಲಿದ್ದ 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 1.44 ಲಕ್ಷ ರೂ.ಮೌಲ್ಯದ 24 ಗ್ರಾಂ.ಬಂಗಾರದ ಜೀರಾಮಣಿ, 1.20 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಬೋರಮಳ, 36 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಮೂಗಿನ ನತ್ತು, 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್ ಸೇರಿ 5.20 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ದೇವಸ್ಥಾನದ ಪೂಜಾರಿ ಅನೀಲ ರಾಠೋಡ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.