ಅಬಕಾರಿ ದಾಳಿ: ಇಬ್ಬರ ಬಂಧನ
ಯಾದಗಿರಿ,ಏ.3-ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಯಾದಗರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಗುರುಮಿಠಕಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗುರುಮಿಠಕಲ ಪಟ್ಟಣದಲ್ಲಿ ದಾಳಿ ನಡೆಸಿ ಹುಸೇನಪ್ಪ ನರಸಪ್ಪ ಎಂಬಾತನನ್ನು ಬಂಧಿಸಿ 90430 ರೂ. 10.440 ಲೀಟರ್ ಮದ್ಯ, ಚನ್ನಬಸಪ್ಪ ಭೀಮಶಪ್ಪ ಎಂಬಾತನನ್ನು ಬಂಧಿಸಿ 88840 ರೂ.ಮೌಲ್ಯದ 8.640 ಲೀmರ್ ಮದ್ಯ ಜಪ್ತಿ ಮಾಡಿದ್ದಾರೆ.
ಯಾದಗರಿಯ ಅಬಕಾರಿ ಉಪ ಆಯುಕ್ತ ಶ್ರೀಶೈಲ್ ಒಡೆಯರ, ಅಬಕಾರಿ ಉಪ ನಿರೀಕ್ಷಕ ಬಸವರಾಜ ಬಿ ರಾಜಣ್ಣವರ, ಅಬಕಾರಿ ಮುಖ್ಯ ಪೇದೆ ಅನಿಲಕುಮಾರ, ಅಬಕಾರಿ ಪೇದೆ ಪ್ರವೀಣಕುಮಾರ, ವಾಹನಚಾಲಕ ದೊಂಡಿಬಾ ಜಾಧವ, ಗೃಹ ರಕ್ಷಕದಳ ಸಿಬ್ಬಂದಿಗಳಾದ ಅರ್ಜುನ ಮತ್ತು ಶಿವಕುಮಾರ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.