ಕುಡಿಯುವ ನೀರು, ಅನ್ನಸಂತರ್ಪಣೆ ಘಟಕ ಉದ್ಘಾಟನೆ
ಕಲಬುರಗಿ,ಏ.3-ಭಾರತಿ ಯುವ ಸೈನ್ಯ ವತಿಯಿಂದ ಸರ್ದಾರ್ ವಲ್ಲಭಾಯಿ ಪಟೇಲ್ ಸರ್ಕಲ್‍ನಲ್ಲಿ ಕುಡಿಯುವ ನೀರು ಮತ್ತು ಅನ್ನ ಸಂತರ್ಪಣೆ ಘಟಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಉದ್ದಿಮೆದಾರರು ಶ್ರೀಧರ್ ರತ್ನಗಿರಿ, ರಾಷ್ಟ್ರೀಯ ಅಧ್ಯಕ್ಷರಾದ ರಾಜು ಸುರಪುರ, ಕಾನೂನು ಸಲಹೆಗಾರ ಅಶೋಕ ನಿಂಬೂರ, ಖ್ಯಾತ ವಕೀಲರಾದ ರವಿಚಂದ್ರ ಗುತ್ತೇದಾರ್, ಯುವ ಮುಖಂಡ ಅರವಿಂದ, ವೈದ್ಯ ಕರಣ ಸುಬೇದಾರ್, ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಂಚನಸೂರ, ಉಪಾಧ್ಯಕ್ಷರಾದ ರಫೀಕ್ ಪಟೇಲ್, ಚಿತ್ತಾಪುರ ತಾಲೂಕು ಅಧ್ಯಕ್ಷÀ ಶಿವರುದ್ರ ಕಟ್ಟಿಮನಿ, ಮಹಿಳಾ ಉಪಾಧ್ಯಕ್ಷರಾದ ಮಾಲಾಶ್ರೀ, ಸವಿತಾ, ಗೌತಮ್ ಹದನೂರು, ಬಸವರಾಜ್ ಬೇಲೂರು, ದಿನೇಶ್ ದೊಡ್ಡಮನಿ ಮತ್ತು ಅನೇಕರು ಉಪಸ್ಥಿತರಿದ್ದರು.