ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹೆಚ್ಚಿನ ಮತದಾನ ಅತ್ಯವಶ್ಯಕ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.3: ದೇಶವನ್ನು ಬದಲಾಯಿಸುವ ಹಕ್ಕು ಮತದಾರರ ಕೈಯಲ್ಲಿ ಇದ್ದು, ಮತದಾನದ ವೇಳೆ ಜಾಗೃತರಾಗಿ ಉತ್ತಮ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ತಿಳಿಸಿದರು.ಭಾವಸಾರ ವಿಜ಼ನ್ ಇಂಡಿಯಾ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆಯ  ಸಹಯೋಗದೊಂದಿಗೆ ನಗರದ ಜಯದೇವ ವೃತ್ತದಲ್ಲಿ ‌ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ದಾವಣಗೆರೆ ಜಿಲ್ಲೆಯಲ್ಲಿ ಶೇ‌.90 ರಷ್ಟ ಮತದಾನದ ಗುರಿ ತಲುಪಲು ಜಾಗೃತಿ ಮೂಡಿಸಲಾಗುವುದು. ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹೆಚ್ಚಿನ ಮತದಾನ ಅತ್ಯವಶ್ಯಕವಾಗಿದೆ.ಕಾರ್ಯಕ್ರಮದಲ್ಲಿ ಭಾವಸಾರ ವಿಷನ್ ಇಂಡಿಯಾ ಅಧ್ಯಕ್ಷರಾದ ಸರಳ ಆಮ್ಟೆ, ಕಾರ್ಯದರ್ಶಿ ರಮೇಶ್ ಗುಜ್ಜಾರ್, ಉಪಾಧ್ಯಕ್ಷ ಅಶೋಕ್ ನವಾಲೆ, ರಮೇಶ್ ಅಂಬರ್ ಕರ್, ಅರುಣ್ ಗುಜ್ಜಾರ್, ನಿಂಗೋಜಿರಾವ್ ಗುಜ್ಜಾರ್, ಆರ್ಥಿ ಗುಜ್ಜಾರ್, ರಮೇಶ್ ತೇಲ್ಕರ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ನಾಗರಾಜ್ ಇತರರು ಇದ್ದರು.