ದೇಶಾಭಿಮಾನ ಜೊತೆ ಸದ್ವರ್ತನೆಯೂ ಇರಬೇಕು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03:  ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಭಾರತ ಮಾತೆಯ ವೀರ ಸುಪುತ್ರ ಛತ್ರಪತಿ ಶಿವಾಜಿ ಮಹಾರಾಜ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ಇಂದು
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ 344ನೇ ಪುಣ್ಯ ಸ್ಮರಣೆ ಹಾಗೂ ನಲಿಕಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ  ಬಹುಮಾನ ವಿತರಸಿ ಮಾತನಾಡಿದರು. ವಿದ್ಯಾರ್ಥಿಗಳು ನಾಡಾಭಿಮಾನ,ದೇಶಾಭಿಮಾನ ಜೊತೆಗೆ ಸದ್ವರ್ತನೆ ಹಾಗೂ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಲಿಕಲಿ ವಿದ್ಯಾರ್ಥಿಗಳಾದ ದೀಪಿಕಾ ವಾಲ್ಮೀಕಿ, ಅಯ್ಯನಗೌಡ,ಸುಪ್ರಿಯಾ, ಗವಿಸಿದ್ದ ಹಾಗೂ ಸುನೀಲ್ ಕುಮಾರ್ ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ವಿ.ಬಸವರಾಜ, ಸುಮತಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ವಿದ್ಯಾರ್ಥಿ ಪ್ರತಿನಿಧಿ ಮಹೇಶ,ತಿಪ್ಪೇಶ್ವರಿ,ಲಾವಣ್ಯ,ಪಲ್ಲವಿ ಮುಂತಾದವರು ಉಪಸ್ಥಿತರಿದ್ದರು