ಸಾಲಭಾದೆ:ರೈತ ಆತ್ಮಹತ್ಯೆ
ಚಿಂಚೋಳಿ,ಏ 3: ತಾಲೂಕಿನ ರುಸ್ತಂಪುರ ಗ್ರಾಮದಲ್ಲಿ ರೈತನೊಬ್ಬ ವಿಷ ಸೇವಿಸಿ ಇಂದು ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ಮೊಹ್ಮದ್ ಸಾಬ್ ಚಾಂದ್ ಸಾಬ್ ಕೊಡ್ಲಿ ಆತ್ಮಹತ್ಯೆಗೆ ಶರಣಾದ ರೈತ. ಸಾಲಭಾದೆಯೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.ವಿಷ ಸೇವಿಸಿದ ರೈತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿದೆ.ಸುಲೇಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.