ಶ್ರದ್ದಾ ಭಕ್ತಿಯಿಂದ ನಡೆದ ಶ್ರೀ ವಿದ್ಯಾನಿಧಿ ತೀರ್ಥರ 160 ನೇ ಆರಾಧನೆ
ತಾಳಿಕೋಟೆ:ಏ.3: ಕಣ್ವಮಠ ಪರಂಪರೆಯ ನಾಲ್ಕನೇ ಯತಿಗಳಾದ ಶ್ರೀ ವಿದ್ಯಾ ನಿಧಿ ತೀರ್ಥರ 160 ನೇ ಆರಾಧನಾ ಮಹೋತ್ಸವವು ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿ ಪ್ರಸ್ತುತ ಪೀಠಾ ಧ್ಯಕ್ಷರಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರ ಸಾನಿಧ್ಯ ದಲ್ಲಿ ಸಂಸ್ಥಾನ ಮಹಾ ಪೂಜೆ ಜರುಗಿತು.
ಪ್ರವಚನ ನೀಡಿದ ವಿಜಯಪುರದ ಶ್ರೀ ವೇ. ಪ್ರಸನ್ನಾಚಾರ್ಯ ಕಟ್ಟಿ ಅವರು ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕು ಧರ್ಮದ ರಕ್ಷಣೆಯಲ್ಲಿ ಯಾರು ತೊಡಗಿಕೊಳ್ಳುತ್ತಾರೋ ಅವರನ್ನು ಧರ್ಮವು ರಕ್ಷೀಸುತ್ತದೆ ಎಂದರು.
ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ನೀಲಕಂಠರಾವ್ ತಲೆಖಾನ್ ಅವರು ಮಾತನಾಡಿ ಸಮಾಜವು ಸಂಘಟನೆಯಿಂದ ಕೂಡಿರಬೇಕು. ಸಂಘಟನೆಯು ಸಂಸ್ಕಾರದಿಂದ ಕೂಡಿರಬೇಕು. ಸಂಸ್ಕಾರ, ಸಂಸ್ಕೃತಿ ಯು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿಕೊಡುವಂತಹ ಕಾರ್ಯ ಪಾಲಕರು ಮಾಡಬೇಕು ಇದು ಅವರ ಮೂಲ ನೆಲೆಗಟ್ಟಾಗಲಿದೆ ಎಂದರು.
ಶ್ರೀಮತಿ ಅನುಪಮಾ ಅಂಬದಾಸ ಜೋಶಿ ವಿಜಯಪುರ ಇವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.
ಶ್ರೀಮತಿ ಸವಿತಾ ಗಲಗಲಿ ಹಾಗೂ ತಂಡದವರಿಂದ ಜರುಗಿದ ಕೃಷ್ಣನ ನೃತ್ಯ ರೂಪಕ ಮತ್ತು ಕೋಲಾಟ ವಿಶೇಷವಾಗಿ ನಡೆಸಿಕೊಟ್ಟರು.
ಶ್ರೀ ಗಾಯತ್ರಿ ಭಜನಾ ಮಂಡಳಿ, ಮಹಾಲಕ್ಷ್ಮೀ ಭಜನಾ ಮಂಡಳಿ ತಾಳಿಕೋಟಿ, ಶ್ರೀಪರ್ಣಿಕ ಭಜನಾ ಮಂಡಳಿ ವಿಜಯಪುರ ಅವರು ನಾಮ ಸಂಕೀರ್ತನೆ ನಡೆಸಿಕೊಟ್ಟರು.
ಆರಾಧನೆಗೆ ತಾಳಿಕೋಟಿ, ವಿಜಯಪುರ, ಲಿಂಗಸೂಗೂರ, ಕೊಡೇಕಲ್, ನಾಗೂರ್, ರಾಯಚೂರ್, ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಈ ಸಮಯದಲ್ಲಿ ವೇ. ಗಂಗಾಧರ್ ಜೋಶಿ, ವೇ. ವೆಂಕಟೇಶಚಾರ್ಯ ಗ್ರಾಮಪುರೋಹಿತ, ರವಿ ಜೋಶಿ, ಯಲಗುರೇಶ್ ಚಬನೂರ್, ವೇ. ಶಂಕರಭಟ್ ಅಗ್ನಿಹೋತ್ರಿ, ಸಮಿತಿಯ ಅಧ್ಯಕ್ಷರಾದ ಗುರುರಾಜ್ ಕುಲಕರ್ಣಿ, ಮಲ್ಹರಾವ್ ದೇಶಪಾಂಡೆ, ಭೀಮರಾವ್ ಕುಲಕರ್ಣಿ, ಸುನೀಲ್ ಕುಲಕರ್ಣಿ, ಮುತ್ತಣ್ಣ ದೇಶಪಾಂಡೆ, ಶಶಿಕಾಂತ್ ದೇಶಪಾಂಡೆ, ರವೀಂದ್ರ ದೇಶಪಾಂಡೆ, ನಾಗೇಶ ದೇಶಪಾಂಡೆ, ಅಶೋಕ್ ದೇಶಪಾಂಡೆ, ವಿಲಾ ಸ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ. ಬಸವಂತರಾವ್ ದೇಶಪಾಂಡೆ, ಪ್ರಹ್ಲಾದ್ ದೇಶಪಾಂಡೆ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶ್ರೀಮತಿ ಜಯಶ್ರೀ ಕನ್ನೂರ್, ಚಂದ್ರಶೇಖರ್ ಕುಲಕರ್ಣಿ ನಾಗೂರ್, ರಾಘವೇಂದ್ರ ಚಾರ್, ಶೇಷಾಗಿರಿರಾವ್. ದೇಶಪಾಂಡೆ, ಅವರಿಗೆ ಸನ್ಮಾನಿಸಲಾಯಿತು.