ವಿಶ್ವ ಆರ್ಟಿಸಮ್ ದಿನಾಚರಣೆ
ಬೀದರ: ಏ.3:ನಗರದ ಜನವಾಡಾ ರಸ್ತೆಯಲ್ಲಿರುವ ವಿಜಯದೇವಿ ಫೌಂಡೇಶನ್ ಮತ್ತು ಐ.ಎ.ಪಿ. ಅಸೊಸಿಯೇಷನ್ ವತಿಯಿಂದ ಇಂದು ವಿಶ್ವ ಆರ್ಟಿಸಮ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವು ಕೇಕ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಕ್ಕಳ ತಜ್ಞರಾದ ಡಾ. ಶಾಂತಲಾ ಕೌಜಲಗಿ ಕಾರ್ಯಕ್ರಮವನ್ನುದ್ದೇಶಿಸಿ ಮಕ್ಕಳನ್ನು ಬೇಗನೆ ಆರ್ಟಿಸಮ್ ಲಕ್ಷಣಗಳನ್ನು ಕಂಡುಕೊಂಡು, ವೈದ್ಯರ ಸಲಹೆಯನ್ನು ಪಡೆಯುವಂತೆ ಸೂಚಿಸಿದರು ಹಾಗೂ ಮಕ್ಕಳಿಗೆ ಫೆÇೀನ್ ಬಳಕೆ ಕಡಿಮೆ ಮಾಡುವಂತೆ ಸಲಹೆ ನೀಡಿದರು ಹಾಗೂ ಪಾಲಕರು ಈ ಒಂದು ಚಿಕಿತ್ಸೆಯನ್ನು ಕೊಡುವುದರಲ್ಲಿ ತಾಳ್ಮೆಯನ್ನು ಇಟ್ಟುಕೊಂಡು ಸಹಕರಿಸಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಡಾ. ಪ್ರಶಾಂತ ರವರು ಮಾತನಾಡುತ್ತಾ, ಕಾರ್ಯಕ್ರಮವನ್ನುದ್ದೇಶಿಸಿ ಮಕ್ಕಳನ್ನು ಸಮಾಜದೊಂದಿಗೆ ಸಹಕರಿಸಬೇಕು, ಸರ್ಕಾರದಿಂದ ಕೆಲವು ಯೋಜನೆಗಳನ್ನು ಪಾಲಕರು ಪಡೆದುಕೊಳ್ಳುವಂತೆ ಹೇಳಿದರು ಹಾಗೂ ಪಾಲಕರನ್ನು ಆರ್ಟಿಸಮ್ ಕುರಿತು ತರಬೇತಿ ಪಡೆದುಕೊಳ್ಳಲು ಸಹಕರಿಸಬೇಕೆಂದು ತಿಳಿಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಮಕ್ಕಳ ತಜ್ಞರಾದ ಡಾ. ಸುಭಾಷ ಪಾಟೀಲ ಇವರು ಕಾರ್ಯಕ್ರಮವನ್ನುದ್ದೇಶಿಸಿ ಮೊದಲು ಮಕ್ಕಳು ಸಮಸ್ಯೆಗೆ ಒಳಗಾದಾಗ ಚಿಕಿತ್ಸೆಯನ್ನು ಪಡೆಯಲು ಹೈದ್ರಾಬಾದಗೆ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ಸದ್ಯ ಈ ಚಿಕಿತ್ಸೆಯನ್ನು ಬೀದರನಲ್ಲಿ ಉಟಗೆ ಆಸ್ಪತ್ರೆಯಲ್ಲಿ ದೊರಕುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಡಾ. ರವಿಕಾಂತ, ಡಾ. ಪ್ರಾಚಿ ರೆಡ್ಡಿ, ಡಾ. ಶ್ರೀನಿವಾಸ, ಡಾ. ಶ್ರೀಕಾಂತ ಪಾಟೀಲ, ಡಾ. ವೆಂಕಟರಮಣ ಪಾಟೀಲ, ಡಾ. ಅರ್ಚನಾ ಕುಲಕರ್ಣಿ, ಡಾ. ಹೇಮಾ ಜೋಷಿ, ಡಾ. ಸಂಗಮೇಶ, ಡಾ. ಆಕಾಂಕ್ಷಾ, ಉಮಾಕಾಂತ ಹಾಗೂ ಪಾಲಕರು ಉಪಸ್ಥಿತರಿದ್ದು, ಪಾಲಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಚಿತ್ರಕಲಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಒಟ್ಟು 9 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ, ಮಕ್ಕಳ ಹೆಸರು ತೈಮೂರ್, ಸಮರ್ಥ, ಅಭಿರಾಮ, ಪ್ರಸಾವ, ಸಾಕೇತ, ಸ್ವಾತಿ, ರುಕಮಾನ, ಕಾರ್ತಿಕ ಹಾಗೂ ಬಸವಶ್ರೀ ವಿಜೇತರಾಗಿದ್ದಾರೆ.
ಈ ಕಾರ್ಯಕ್ರಮದ ಸ್ವಾಗತವನ್ನು ಡಾ. ಅರ್ಚನಾ ಅವರು ಮಾಡಿದರು, ಕಾರ್ಯಕ್ರಮದ ನಿರೂಪಣೆ ರೇಣುಕಾ ರವರು ನೆರವೇರಿಸಿಕೊಟ್ಟರು, ವಂದನಾರ್ಪಣೆಯನ್ನು ಡಾ. ಹೇಮಾ ರವರು ನೆರವೇರಿಸಿಕೊಟ್ಟರು.