ದಾವಣಗೆರೆಯಲ್ಲಿ ಕ್ರಿಕೇಟ್ ತರಬೇತಿಗೆ ಚಾಲನೆ

ಸಂಜೆವಾಣಿ ವಾರ್ತೆದಾವಣಗೆರೆ.ಏ.೩; ಉತ್ತಮ ಕ್ರಿಕೆಟ್ ತರಬೇತಿಗೆ ಹಿಂದಿನಂತೆ ದಾವಣಗೆರೆ ನಗರದ ಕ್ರೀಡಾಪಟುಗಳು ಬೆಂಗಳೂರು ಅಥವಾ ಮೈಸೂರನ್ನು ಅರಸಿ ಹೋಗಿ ಹೆಚ್ಚು ವೆಚ್ಚವನ್ನು ಮಾಡುವ ಅವಶ್ಯಕತೆ ಈಗ ಇಲ್ಲದಂತಾಗಿದೆ, ದಾವಣಗೆರೆಯಲ್ಲಿಯೇ ಅತ್ಯುತ್ತಮ ಕ್ರಿಕೆಟ್ ತರಬೇತಿಯನ್ನು ದಾವಣಗೆರೆ ಕ್ರಿಕೆಟ್ ಅಕಾಡೆಮಿಯು ಕಳೆದ 23 ವರ್ಷಗಳಿಂದ ನೀಡುತ್ತಾ ಬಂದಿದೆ. ನುರಿತ ಬಿಸಿಸಿಐ ಹಾಗೂ ಕೆ ಎಸ್ ಸಿ ಎ ಮಾನ್ಯತೆ ಪಡೆದಿರುವ ಕೋಚ್ ಗಳು ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿದ್ದು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ತರಬೇತಿ ವೆಚ್ಚದ ಜೊತೆಗೆ ವಸತಿ, ಊಟದ  ಹಾಗೂ ತರಬೇತಿ ವೆಚ್ಚವನ್ನು ಬರಿಸಲಾಗದೆ ಎಷ್ಟೋ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದರು, ಈಗ ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ತರಬೇತಿ ದೊರೆಯಲಿದ್ದು ದಾವಣಗೆರೆಯ ಕ್ರೀಡಾಪಟುಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ  ಪ್ರಾರಂಭವಾದ 23ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ದಿನೇಶ್ ಕೆ ಶೆಟ್ಟಿಯವರು ಮಾತನಾಡಿದರು.ಕುಸ್ತಿಯಲ್ಲಿ ಬಂಗಾರ ಪದಕಗಳನ್ನು ಪಡೆದಿರುವ ಸಿರಿಗೆರೆಯ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀರಾಮ ಪ್ರಭು ಅವರು ಮಾತನಾಡಿ ಏನನ್ನಾದರೂ ಕಲಿಯಬೇಕು ಎಂದರೆ ಮೊದಲು ಆಸಕ್ತಿ ಇರಬೇಕು ನಂತರ ದೇಹವನ್ನು ದಂಡಿಸಲು ತಯಾರಿರಬೇಕು ಆಗ ಒಬ್ಬ ಕ್ರೀಡಾಪಟು ಅತ್ಯುತ್ತಮ ಕ್ರೀಡಾಪಟು ಆಗಲು ಸಾಧ್ಯ, ನೀವೆಲ್ಲ ಉತ್ತಮ ರೀತಿಯಲ್ಲಿ ಕ್ರಿಕೆಟ್ ಕಲಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಕೀರ್ತಿ ತರಬೇಕು ಎಂದು ಹಾರೈಸಿದರು. ವೇದಿಕೆಯಲ್ಲಿ  ಶಾಮನೂರು ತಿಪ್ಪೇಶ್,  ರವಿ,  ಮಂಜುನಾಥ,  ವಸಂತ್, ಕಾರ್ಪೊರೇಟರ್  ಉದಯ್  ಉಪಸ್ಥಿತರಿದ್ದರು. ಏಪ್ರಿಲ್ 2 ರಿಂದ ಮೇ 31ರವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರ ದ ಕೋಚ್ ಗಳಾದ  ಗೋಪಾಲಕೃಷ್ಣ,  ತಿಮ್ಮೇಶ್,  ಕುಮಾರ್,  ಉಮೇಶ್ ಸಿರಿಗೆರೆ,  ವೆಂಕಟೇಶ್,  ಮನೋಜ್ ಕುಮಾರ್  ಕ್ರೀಡಾಪಟುಗಳಿಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಶಿಬಿರದಲ್ಲಿ ಮಕ್ಕಳಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಶಿಬಿರಕ್ಕೆ ಸೇರಿಸಲು ಇಚ್ಛಿಸುವವರು  ಗೋಪಾಲಕೃಷ್ಣ 7899610318 10318,  ಅಂಬರ್ಕರ್ 99645 99160  ತಿಮ್ಮೇಶ್ 98804 4060 ಅವರನ್ನು ಸಂಪರ್ಕಿಸಬಹುದು.