ಮಾತೋಶ್ರೀ ಬಸವಾಂಬೆಯ 73ನೇ ಜಾತ್ರಾ ಮಹೋತ್ಸವ
ಜೇವರ್ಗಿ :ಏ.3: : ತಾಲೂಕಿನ ಸುಕ್ಷೇತ್ರ ಶಖಾಪುರ ಗ್ರಾಮದ ಸದ್ಗುರು ಶ್ರೀ ವಿಶ್ವರಾಧ್ಯ ತಪೆÇೀವನಮಠದಲ್ಲಿ ಇಂದು ಮಾತೋಶ್ರೀ ಬಸವಾಂಬೆಯ 73ನೇ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಶ್ರೀಗಳು ಪತ್ರಿಕಾಪ್ರಕಠಣೆಯಲ್ಲಿ ತಿಳಿಸಿದರು.
ಪುರಾಣ ಕಾರ್ಯಕ್ರಮ ಹಾಗೂ ಧರ್ಮಸಭೆ ಮತ್ತು ಇತರ ಸಂಸ್ಕøತಿಕ ಕಾರ್ಯಕ್ರಮಗಳಿಗೆ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯರು ಕಾಶಿ ಪೀಠ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬಸವಾಂಬೆ ಜ್ಞಾನ ಮಂದಿರ ಹಾಗೂ ಧರ್ಮಸಭೆ ಉದ್ಘಾಟನೆ ರಾಜಕೀಯ ಮುಖಂಡರು ನೆರವೇರಿಸಲಿದ್ದಾರೆ.
ಬಸವಾಂಬೆ ತಾಯಿಯ ಜೋಡು ರಥೋತ್ಸವ ಹಾಗೂ ಬಸವಾಂಬೆ ಪ್ರಶಸ್ತಿ ಷ. ಬ್ರ. ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಶಾಂತೇಶ್ವರ್ ಸಂಸ್ಥಾನ ಹಿರೇಮಠ ಹುಕ್ಕೇರಿ ಬೆಳಗಾವಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಮಾತೋಶ್ರೀ ಬಸವಾಂಬೆಯ ಹುಟ್ಟೂರಿನಿಂದ ಮುಕ್ತಿಮಂದಿರವಾದ ಶಖಾಪುರು ತಪೆÇೀನಮಠಕ್ಕೆ ಡಾ. ಶಿವಾಚಾರ್ಯರತ್ನ ಸಿದ್ಧರಾಮ ಶಿವಾಚಾರ್ಯರು ಪಾದಯಾತ್ರೆ ಮಾಡಿದ್ದಾರೆ.
ಸದ್ಗುರು ವಿಶ್ವಾರಾಧ್ಯರ ಹಾಗೂ ಬಸವಾಂಬೆಯ ಜೋಡರಥೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಂಸ್ಕೃತಿ ಕಾರ್ಯಕ್ರಮ ಮತ್ತು ಧರ್ಮಸಭೆ ಜರುಗಲಿದೆ ಆದಕಾರಣ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ವಿಶ್ವರಾಧ್ಯರ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪತ್ರಿಕಾ ಪ್ರಕಠಣೆಯ ಮುಲಕ ಮನವಿ ಮಾಡಿಕೊಂಡರು.