ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ ಅಭಿಯಾನ
ಬಾದಾಮಿ,ಏ.3: ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಸೈಕಲ್ ಜಾಗೃತಿ ಜಾಥಾ ಕ್ಕೆ ನಗರದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ದುರ್ಗೇಶ ಎಸ್.ಜಿ. ಮತ್ತು ತಹಶೀಲದಾರ ಜೆ.ಬಿ.ಮಜ್ಜಗಿ ಜಂಟಿಯಾಗಿ ಚಾಲನೆ ನೀಡಿದರು.
ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿ, ತಾಲೂಕಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೈಕಲ್ ಮೂಲಕ ಮತದಾನ ಜಾಗೃತಿ ಅಭಿಮಾಯನಕ್ಕೆ ಜಾಥಾ ಮೂಲಕ ತಪ್ಪದೇ ಮತದಾನ ಮಾಡಿ, ಮತದಾನ ಪವಿತ್ರವಾದ ಹಕ್ಕು, ಹೀಗೆ ಹಲವು ಭಿತ್ತಿಚಿತ್ರ, ಪೊಸ್ಟರ್, ಸ್ಟಿಕರ್ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ.ಇಒ ಬಿರೇಂದ್ರ ಸಿಂಗ್, ಬಿಇಒ ಎನ್.ವೈ.ಕುಂದರಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ. ಬಿ.ದೊಡ್ಡಪ್ಪನ್ನವರ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಪಿ.ಎಸ್.ಐ.ವಿಠ್ಠಲ ನಾಯಕ, ಪುರಸಭೆ ಮುಖ್ಯಾಧಿಕಾರಿ ಡಿ.ಸುಧಾಕರ, ದೈನಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ ಸಬನೀಸ್, ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ, ಎಂ.ಸಿ.ನಾಲತವಾಡ, ಮುಖ್ಯಶಿಕ್ಷಕ ಬಿ.ಎಸ್.ಕರಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಿವಪ್ರಕಾಶ ಇಟಗಿ, ಸೇರಿದಂತೆ ಬಾದಾಮಿ ನಗರದ ಮತಗಟ್ಟೆ ಅಧಿಕಾರಿಗಳು ಹಾಜರಿದ್ದರು.