ಟಿ ಹೆಚ್ ಎಂ ಬಸವರಾಜಗೆ ಸಮಾಜ ಸೇವಾ ರತ್ನ ಪ್ರಶಸ್ತಿ”
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಶ್ರೀ ಗುರು ಪುಟ್ಟರಾಜ ಗವಾಯಿಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನಿನ್ನೆ ಹಮ್ಮಿಕೊಂಡಿದ್ದ   ಶ್ರೀ ಪಂಪಯ್ಯ ತಾತ  ಪಿರಮಿಡ ಧ್ಯಾನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ‌.  ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಅವರಿಗೆ ರಾಜ್ಯಮಟ್ಟದ “ಸಮಾಜ ಸೇವಾ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿರುಗುಪ್ಪದ ಬಸವಭೂಷಣ ಸ್ವಾಮಿ,  ಲಲಿತಾ ನಾರಾಯಣ, ಶಿಲ್ಪಾ, ರಾಜಶ್ರೀ, ಗೀತಾ ಯಾದವ್, ವಿಜಯಲಕ್ಷ್ಮಿ, ಗೌರಿಶಂಕರಸ್ವಾಮಿ,  ಎಚ್. ಎಂ. ಅಮರೇಶ್, ರುದ್ರಮುನಿ ಸ್ವಾಮಿ, ಅಶೋಕ್, ಚನ್ನಬಸವನಗೌಡ, ಶ್ರೀಧರ್, ಮಲ್ಲನಗೌಡ ಗವಾಯಿ,  ನಾಗಭೂಷಣ್ ಗವಾಯಿ, ತಬಲಾ ವಿರೂಪಾಕ್ಷಪ್ಪ ಮತ್ತು ಟ್ರಸ್ಟ್ ನ ಅಧ್ಯಕ್ಷ ಮೃತ್ಯುಂಜಯ ಬಂಡ್ರಾಳ್ ಮುಂತಾದವರು ಉಪಸ್ಥಿತರಿದ್ದರು.