ಬಿಜೆಪಿ ಪಕ್ಷದಿಂದ ಮೈಕ್ರೋ ಡೊನೇಷನ್ ಯಶಸ್ವಿ ಅಭಿಯಾನ
ರಾಯಚೂರು.ಏ.೦೩- ಭಾರತೀಯ ಜನತಾ ಪಕ್ಷದ ನಗರ ಮಂಡಲ ವತಿಯಿಂದ ನಿನ್ನೆ ಸಂಜೆ ಮೈಕ್ರೋ ಡೊನೇಷನ್ ಅಭಿಯಾನ ಕಾರ್ಯಕ್ರಮ ನಡೆಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷರು, ನಗರ ಶಾಸಕರೂ ಆದ ಡಾ.ಎಸ್.ಶಿವರಾಜ ಪಾಟೀಲರು ಅಭಿಯಾನಕ್ಕೆ ಚಾಲನೆ ನೀಡುತ್ತ ನಗರದ ಶೆಟ್ಟಿ ಬಾವಿ ವೃತ್ತ, ಸರಾಫ್ ಬಜಾರ್, ಕಿರಾಣಿ ಬಜಾರ್, ಬಟ್ಟೆ ಬಜಾರ ರಸ್ತೆಯಲ್ಲಿನ ಅಂಗಡಿಗಳಿಗೆ ಭೇಟಿ ನೀಡಿ ಬಿಜೆಪಿ ಪಕ್ಷಕ್ಕೆ ಕಿರು ದೇಣಿಗೆ ನೀಡುವಂತೆ ಅರಿಕೆ ಮಾಡಲಾಯಿತು. ತಮ್ಮ ತಮ್ಮ ಮೊಬೈಲ್ ಗಳಲ್ಲಿ ನಮೋ ಅ?ಯಪ್ ಡೌನ್‌ಲೋಡ್ ಮಾಡಿಕೊಂಡು ಆ ಮೂಲಕ ಪಕ್ಷಕ್ಕೆ ದೇಣಿಗೆ ಸಲ್ಲಿಸಲು ವಿನಂತಿಸಲಾಯಿತು.
ಈ ಅಭಿಯಾನದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎನ್.ಶಂಕ್ರಪ್ಪ ವಕೀಲರು,ಪಕ್ಷದ ಹಿರಿಯರಾದ ರಾಜಕುಮಾರ, ಕಡಗೋಲು ಆಂಜನೇಯ, ನಗರ ಮಂಡಲ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ನಿಕಟಪೂರ್ವ ಅಧ್ಯಕ್ಷ ಬಿ.ಗೋವಿಂದ, ಪ್ರಧಾನ ಕಾರ್ಯದರ್ಶಿಗಳಾದ ಕಡಗೋಲು ರಾಮಚಂದ್ರ, ವಿಜಯ ಕುಮಾರ ಸಜ್ಜನ, ಪಲುಗುಲ ನಾಗರಾಜ, ನಿಕಟಪೂರ್ವ ಕಾರ್ಯದರ್ಶಿ ಪ್ರದೀಪ್ ಸಾನಬಾಳ, ಉಪಾಧ್ಯಕ್ಷರುಗಳಾದ ಎಲ್.ಜಿ.ಶಿವ ಕುಮಾರ, ಎ.ಚಂದ್ರಶೇಖರ, ಪಿ.ಶ್ರೀನಿವಾಸ ರೆಡ್ಡಿ, ನಾಗರಾಜ ಭಾಲ್ಕಿ, ನಾಗವೇಣಿ, ನರೇಂದ್ರ ನಾಯಕ, ಜೆ.ಎಂ.ಮಲ್ಲೇಶ, ಪ್ರಸಾದ ಜೈನ್, ಪಲುಗುಲ ಚಿನ್ನಯ್ಯ, ವೀರೇಶ ತಳವಾರ ಸೇರಿದಂತೆ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.