ಆರೋಗ್ಯ ಇಲಾಖೆ: ಮತದಾನ ಜಾಗೃತಿ ಕಾರ್ಯಕ್ರಮ
ರಾಯಚೂರು,ಏ.೦೩- ಏ.೨ ರಂದು ನಗರದ ಅರಬ್ ಮೊಹಲ್ಲಾದಲ್ಲಿ ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ .ಕೆ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಸಂವಿಧಾನ ಬದ್ಧವಾದ ಮತದಾನದ ಹಕ್ಕನ್ನು ತಪ್ಪದೇ ತಮ್ಮ ಮತವನ್ನು ಚಲಾಯಿಸಬೇಕು ನಿಮ್ಮ ಅಮೂಲ್ಯವಾದ ಮತದಾನ ದೇಶದ ಭವಿಷ್ಯವನ್ನು ಬದಲಾವಣೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ನಿಶಾಂತ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.