ಐದನಾಳ: ಶ್ರೀಶೈಲಕ್ಕೆ ಗ್ರಾಮಸ್ಥರ ಪಾದಯಾತ್ರೆ
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮಾ.೦೩- ತಾಲೂಕಿನ ಐದನಾಳ ಗ್ರಾಮದಿಂದ ಭಕ್ತಾದಿಗಳು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.ತಾಲೂಕಿನ ಐದನಾಳ ಗ್ರಾಮದಿಂದ ಶ್ರೀಶೈಲವು ಸುಮಾರು ೪೦೦ ಕಿಮೀ ಆಗುತ್ತಿದ್ದು ಅಷ್ಟು ದೂರವನ್ನು ಕಾಲುನಡೆಗೆಯ ಮೂಲಕವೇ ನಡೆದುಕೊಂಡು ಹೋಗಿ ದರ್ಶನ ಪಡೆಯಲಿದ್ದಾರೆ ಪಾದಯಾತ್ರೆಯಲ್ಲಿ ಪುರಷರು ಯುವಕರು ಪಾದಯಾತ್ರೆಗೆ ಹೊರಟಿದಾರೆ ಸುಮಾರು ೧೫ ದಿನಗಳ ಪಾದಯಾತ್ರೆ ಇದಾಗಿದ್ದು ಯುಗಾದಿಯಂದು ಶ್ರೀಶೈಲದಲ್ಲಿ ದರ್ಶನ ಪಡೆಯಲಿದ್ದಾರೆ ಗ್ರಾಮದ ಜನತೆ ಪಾದಯಾತ್ರೆ ಹೊರಟಿರುವರು.ಬೀರಪ್ಪ, ಶಿವನಗುತ್ತಿ, ಬಸವಲಿಂಗಪ್ಪ ಹಿರೇ ಕುರುಬರು, ಬಸಪ್ಪ ಆನೆಹೂಸೂರ, ಬೀರಪ್ಪ ಕಟಾಲಿ, ಆದಪ್ಪ ಕಕ್ಕೇರಿ, ಮಂಜುನಾಥ ಕಕ್ಕೇರಿ, ಮಂಜುನಾಥ, ಬಟಾಳಿ ಶರಣು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.