ರಾಯಚೂರು ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕರಿಂದ ಕಾರ್ಯಕರ್ತರ ಸಮಾವೇಶ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೦೩- ಪಟ್ಟಣದ ಭಾರತ್ ಜೋಡೊ ಭವನದಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ನಡೆದ ಮಾನ್ವಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ರಾಯಚೂರು ಲೋಕಸಭಾ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿ ದೇಶದಲ್ಲಿ ನೂರು ವರ್ಷಗಳ ಇತಿಹಾಸವಿರುವ ಜನಪರ ವಾಗಿರುವ ಕಾಂಗ್ರೇಸ್ ಪಕ್ಷದಿಂದ ರಾಯಚೂರು ಲೋಕಸಭೆಗೆ ಅಭ್ಯರ್ಥಿಯಾಗಿ ಅವಕಾಶ ದೊರೆತಿದ್ದು ಅತ್ಯಂತ ಜಾವಾಬ್ದಾರಿಯುತವಾಗಿ ನಾನು ಕ್ಷೇತ್ರದ ಅಭಿವೃದಿಗೆ ಶ್ರಮಿಸುತ್ತೆನೆ ಎಂದರು.
೧೯೯೯ರಲ್ಲಿ ನಾನು ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುವಾಗ ಜಿಲ್ಲೆಯ ಅಭಿವೃದ್ದಿಗೆ ಜಿಲ್ಲೆಯ ಎಲ್ಲಾ ಶಾಸಕರು ನನಗೆ ಸಹಕಾರ ನೀಡಿದ್ದರಿಂದಲೇ ಜಿಲ್ಲೆಯ ಅಭಿವೃದ್ದಿ ಮಾಡಲು ಸಾಧ್ಯವಾಗಿದೆ.ಜಿಲ್ಲೆಯಲ್ಲಿ ಖುಷ್ಕಿ, ನೀರಾವರಿ ಕೃಷಿ, ವೈವಿದ್ಯಾಮಯವಾದ ಸಂಸ್ಕೃತಿ ಭೋಗೋಳಿಕತೆ, ಶ್ರೀಮಂತ, ಬಡವ ಎನ್ನುವ ಸಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಜಿಲ್ಲೇಯಲ್ಲಿ ಜಿಲ್ಲಾಧಿಕಾರಿಯಾಗಿ, ಮುಖ್ಯ ಕಾರ್ಯದರ್ಶಿಯಾಗಿ ಕೆ.ಪಿ.ಟಿ.ಸಿ.ಎಲ್. ಎಂ.ಡಿ. ಯಾಗಿ ಕಳೆದ ೨೦ವರ್ಷಗಳಿಂದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಮಕ್ಕಳು ಹುಟ್ಟಿದ್ದು ಕೂಡ ರಾಯಚೂರಿನಲ್ಲಿ ಅವರ ವಿದ್ಯಾಭ್ಯಾಸ ನಡೆದಿದ್ದು ಕೂಡ ಇಲ್ಲೆ ನನ್ನ ಕರ್ಮ ಭೂಮಿ ಕೂಡ ಇದೆ ಆಗಿದೆ. ಅದ್ದರಿಂದ ನನ್ನನ್ನು ಬೇರೆಯವರು ಎನ್ನಲು ಸಾಧ್ಯವಿಲ್ಲ ನನ್ನಗೆ ಅವಕಾಶ ನೀಡಿದಲ್ಲಿ ರಾಯಚೂರಿನ ಬೇಕು-ಬೇಡಗಳನ್ನು, ಸಮಸ್ಯೆಗಳನ್ನು ದಿಲ್ಲಿ ಆಡಳಿತಕ್ಕೆ ತಲುಪಿಸಲು ನನಗೆ ಆಡಳಿತ ಭಾಷೆ ಕೂಡಚೆನ್ನಾಗಿ ಗೋತ್ತಿದ್ದೆ. ದಿಲ್ಲಿಯಿಂದ ರಾಜ್ಯಕ್ಕೆ ಯೋಜನೆಗಳನ್ನು ಕೂಡ ತರಬಲ್ಲೆ ಕ್ಷೇತ್ರದಲ್ಲಿನ ೨೦ಲಕ್ಷ ಜನರನ್ನು ತಲುಪುವುದಕ್ಕೆ ಕೇವಲ ೩೫ ದಿನಗಳ ಸಮಯವಕಾಶ ಮಾತ್ರ ಇರುವುದರಿಂದ ಪಕ್ಷದ ಕಾರ್ಯಕರ್ತರು ನನ್ನ ಪರವಾಗಿ ಮತ ಕೇಳಿ, ದೇಶದಲ್ಲಿ ಕಳೆದ ೧೦ ವರ್ಷಗಳಿಂದ ಹೇಳಿದ ಅಚ್ಚೆದಿನ ಬರಲಿಲ್ಲ, ದೇಶದಲ್ಲಿ ಹೆಚ್ಚುತ್ತಿರುವ ನಿರೋದ್ಯೋಗ, ಬೆಲೆ ಏರಿಕೆ, ಪ್ರಜಾಪ್ರಭುತ್ವಕ್ಕೆ ಬಂದಿರುವ ಗಂಡಾಂತರ, ದೇಶದ ಮಣಿಪುರದಲ್ಲಿ ನಡೆದ ಘಟನೆ, ದೆಹಲಿಯಲ್ಲಿ ಒಂದು ವರ್ಷದಿಂದ ರೈತರು ಕೇಂದ್ರದ ವಿರುದ್ದ ಚಳುವಳಿಯನ್ನು ನಡೆಸುತ್ತಿದ್ದಾರೆ.ಲಡಖ್ ನಲ್ಲಿ ಕಳೆದ ೨೦ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದಾರು ಕೂಡ ಕಣ್ಣು ಮುಚ್ಚಿ ಕುಳಿತಿರುವ ಸರಕಾರವನ್ನು ನೋಡಿ ಪ್ರಚೋದನೆಗೆ ಒಳಪಟ್ಟು ನಾನು ದೇಶದ ಹಿತಕ್ಕಾಗಿ ಚುನಾವಣೆಗೆ ನಿಲ್ಲಬೇಕಾಯಿತು ರಾಜ್ಯದಲ್ಲಿನ ಸರಕಾರದ ಉತ್ತಮ ಸಾಧನೆ, ಜನಪರ ನೀತಿಗಳು ಗ್ಯಾರಂಟಿ ಯೋಜನೆಗಳು ನನ್ನ ಗೇಲುವಿಗೆ ಸಹಕಾರಿಯಾಗಲಿವೇ ಎಂದು ತಿಳಿಸಿದರು. ನಂತರ ಸಚಿವ ಎನ್.ಎಸ್.ಬೋಸರಾಜ ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಶಾಂತಪ್ಪ, ಶರಣಯ್ಯ ನಾಯಕ, ರಾಜಾ ವಸಂತನಾಯಕ, ಜಯಣ್ಣ, ಶಿವಮೂರ್ತಿ, ಬಾಲಸ್ವಾಮಿಕೊಡ್ಲಿ, ಅಯ್ಯನಗೌಡ ಪಾಟೀಲ್, ಸಮದಾನಿ ನಾಯಕ, ಬಿ.ಕೆ. ಅಮರೇಶಪ್ಪ, ಜಯಂತರಾವ್, ತಿಪ್ಪಣ್ಣ ಬಾಗಲವಾಡ, ಕೆ.ಪಿ.ಸಿ.ಸಿ. ಮಹಿಳಾ ಘಟಕದ ಪ್ರ.ಕಾರ್ಯದರ್ಶಿ ಹಾಗೂ ರಾಯಚೂರು ಕ್ಷೇತ್ರದ ಉಸ್ತುವರಿಗಳಾದ ಶೋಭ, ಮಹಿಳಾ ಘಟಕದ ನಾಗಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.