ಸಚಿವ ಬೋಸರಾಜು, ಜಿ.ಕುಮಾರ ನಾಯಕ ಅಭ್ಯರ್ಥಿರನ್ನು ಸ್ವಾಗತಿಸಿದ ಡಿಎಸ್ ಹುಲಗೇರಿ
ಲಿಂಗಸೂಗೂರು.ಏ.೦೩- ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎಸ್.ಹುಲಗೇರಿ, ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಜಿ.ಕುಮಾರ್ ನಾಯಕ್ ಹಾಗೂ ಸಚಿವರಾದ ಎನ್.ಎಸ್.ಬೋಸರಾಜ ಅವರನ್ನು ಸ್ವಾಗತಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಲಿಂಗಸೂಗೂರು ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಬಿ.ಜಿ.ಗುರಿಕಾರ, ಮೊಹ್ಮದ್ ರಫಿ, ಮುದ್ದಪ್ಪ ಸಾಹುಕಾರ್, ಲಿಂಗರಾಜು ಹಟ್ಟಿ, ಸುಬಾನು, ಜಲ್ಲಿ ಬಸವರಾಜ ಸೇರಿದಂತೆ ಅನೇಕರು ಇದ್ದರು.