ಕೋನಾಪುರ ಪೇಟೆ ಚರ್ಚೆಗೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ, ಸಚಿವ ಬೋಸರಾಜು, ಶಾಸಕ ಹಂಪಯ್ಯ ನಾಯಕ್ ಸೌಹಾರ್ದಯುತ ಭೇಟಿ
ರಾಯಚೂರು.ಏ.೦೩- ಮಾನ್ವಿಯ ಕೋನಾಪೂರ್ ಪೇಟೆಯಲ್ಲಿರುವ ಸಂತ ಮೇರಿ ಚರ್ಚೆಗೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಬೋಸರಾಜು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೇಟಿ ನೀಡಿ, ಸೌಹಾರ್ದಯುತವಾಗಿ ಸಮಾಜ ಮುಖಂಡರೊಂದಿಗೆ ಮಾತನಾಡಿದರು.
ಸಂದರ್ಭದಲ್ಲಿ ಮುಖಂಡರಾದ ಕೆ.ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಪೂರ್ ಸಾಬ್, ಬಾಲಸ್ವಾಮಿ ಕೊಡ್ಲಿ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ವಸಂತ್ ನಾಯಕ್, ಬಿ.ಕೆ.ಅಮರೇಶಪ್ಪ, ಖಾಲೀದ್ ಗುರು, ರೌಡೂರು ಮಹಾಂತೇಶ ಸ್ವಾಮಿ, ಸೇರಿದಂತೆ ಅನೇಕರು ಇದ್ದರು.