ರೂ.2000 ಕೋಟಿ ಒಟ್ಟೂ ವ್ಯವಹಾರದ ಮೈಲಿಗಲ್ಲು ದಾಟಿದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್
ಶಿರಸಿ,ಏ3: ಮಾರ್ಚ್ 31, 2024ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರೂ.2000 ಕೋಟಿ ಒಟ್ಟೂ ವ್ಯವಹಾರದ ಮೈ¯ುಗ¯್ಲು ದಾಟುವುದರೊಂದಿಗೆ ಹಾಗೂ ರೂ.10 ಕೋಟಿಗಿಂತ¯ೂ ಹೆಚ್ಚಿನ ನಿವ್ವಳ ಲಾಭಗಳಿಸುವುದರೊಂದಿಗೆ “ಶಿರಸಿ ಅರ್ಬನ್ ಸಹಕಾರಿ ಬ್ಯಾಂಕು” ಹೊಸ ದಾಖಲೆಯನ್ನು ನಿರ್ಮಿಸಿದೆ.
ಬ್ಯಾಂಕಿನ ಒಟ್ಟೂ ವ್ಯವಹಾರವು ಕಳೆದ ಆರ್ಥಿಕ ವರ್ಷದಲ್ಲಿ ರೂ.2055 ಕೋಟಿಗಳಿಗೆ ತ¯ುಪಿದ್ದು, ರೂ.13.75 ಕೋಟಿ ನಿರ್ವಹಣಾ ಲಾಭ ಹಾಗೂ ರೂ.10.29 ಕೋಟಿ ನಿವ್ವಳ ಲಾಭವನ್ನು ಬ್ಯಾಂಕು ಗಳಿಸಿದೆ. 47,000 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಶಿರಸಿ ಅರ್ಬನ್ ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ ರೂ.1135 ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ ರೂ.1245 ಕೋಟಿಗಳಿಗೆ ಹಾಗೂ ಸಾಲ ಮುಂಗಡಗಳು ಕಳೆದ ವರ್ಷದ ರೂ.748 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.810 ಕೋಟಿಗಳಿಗೆ ಏರಿಕೆಯಾಗಿರುವುದು ಕೂಡ ಬ್ಯಾಂಕಿನ ಇತಿಹಾಸದಲ್ಲಿ ನೂತನ ದಾಖಲೆಯಾಗಿದೆ.
ಒಟ್ಟೂ ರೂ.497 ಕೋಟಿ ಹಣವನ್ನು ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ವಿವಿಧ ಬ್ಯಾಂಕ್‍ಗಳಲ್ಲಿ ಗುಂತಾಯಿಸಿ ತನ್ನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಈ ವರ್ಷ ತನ್ನ ಶೇರು ಬಂಡವಾಳವನ್ನು ಕಳೆದ ವರ್ಷದ ರೂ.30.27 ಕೋಟಿಗಳಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರೂ.34.12 ಕೋಟಿಗಳಿಗೆ ಹೆಚ್ಚಿಸುವುದರ ಮೂಲಕ ಶೇಕಡಾ 12.72 ರಷ್ಟು ವೃದ್ಧಿ ದಾಖಲಿಸಿದೆ. ಬ್ಯಾಂಕಿನ ಸ್ವಂತ ನಿಧಿಗಳು ರೂ.125.82 ಕೋಟಿಗಳಿಗೆ ಹಾಗೂ ಸ್ವಂತ ಬಂಡವಾಳ ರೂ.159.94 ಕೋಟಿಗಳಿಗೆ ವೃದ್ಧಿಗೊಂಡಿರುತ್ತದೆ.
ಬ್ಯಾಂಕಿನ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವು ಸತತವಾಗಿ ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಬ್ಯಾಂಕು ಒಟ್ಟೂ 18 ಶಾಖೆಗಳು ಹಾಗೂ 2 ವಿಸ್ತರಣಾ ಕೌಂಟರ್‍ಗಳನ್ನು ಹೊಂದಿದ್ದು, 247 ಬ್ಯಾಂಕಿಂಗ ವ್ಯವಹಾರಕ್ಕಾಗಿ ಹೊಸ ಡಿಜಿಟೆಲ್ ಬ್ಯಾಂಕಿಂಗ ಸೌ¯ಭ್ಯಗಳು ಗ್ರಾಹಕರಿಗೆ ¯ಭ್ಯವಿರುತ್ತವೆ. ಬ್ಯಾಂಕು ಹಿರಿಯ ನಾಗಕರಿಗೆ ಆಕರ್ಷಕ 8.75% ಬಡ್ಡಿ ದರದಲ್ಲಿ ಸಮೃದ್ಧಿ ಠೇವಣಿ ಯೋಜನೆಯನ್ನು ಪರಿಚಯಿಸಿರುತ್ತದೆ. ಗೃಹ ಸಾಲ – 9.00%, ಕಾರು ಸಾಲ – 9.00%, ವ್ಯವಹಾರ, ಉದ್ದಿಮೆಗಳಿಗೆ ದುಡಿಯುವ ಬಂಡವಾಳಕ್ಕಾಗಿ – 9.95% ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕು ನೀಡುತ್ತಿದ್ದು, ಸದಸ್ಯರು ಹಾಗೂ ಗ್ರಾಹಕರು ಈ ಸಾಲ ಯೋಜನೆಗಳ ಲಾಭ ಪಡೆಯಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಜಯದೇವ ನಿಲೇಕಣಿಯವರು ತಿಳಿಸಿರುತ್ತಾರೆ.
ಬ್ಯಾಂಕಿನ ಈ ಎಲ್ಲ ಸಾಧನೆಗಳಿಗೆ ಗೌರವಾನ್ವಿತ ಸದಸ್ಯರ, ಅಭಿಮಾನಿ ಗ್ರಾಹಕರ ಅಭೂತಪೂರ್ವ ವಿಶ್ವಾಸ, ನಿರಂತರ ಸಹಕಾರ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಕಾರಣವೆಂದು ಬ್ಯಾಂಕಿನ ಅಧ್ಯಕ್ಷರಾದ ಜಯದೇವ ನಿಲೇಕಣಿಯವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಆರತಿ ಶೆಟ್ಟರ್‍ರವರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.