ವೀರಶೈವ ಲಿಂಗಾಯತ ಸಮಾಜದವತಿಯಿಂದ ಇಫ್ತಾರ ಕೂಟ
ಚಿಂಚೋಳಿ,ಏ.3- ಪಟ್ಟಣದ ಚಂದಾಪುರದ ಪಟೇಲ್ ಕಾಲೋನಿಯ ಮದರ್ಸಾದಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ ಹಬ್ಬ ಅಂಗವಾಗಿ ತಾಲೂಕಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮುಸ್ಲಿಂ ಸಮಾಜದ ಮುಖಂಡರಾದ ಕೆ ಎಂ ಬಾರಿ, ಅವರು ಮಾತನಾಡಿ ಪವಿತ್ರ ರಂಜಾನ ಹಬ್ಬ ಅಂಗವಾಗಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಇಫ್ತಾರ ಕೂಟ ಹಮ್ಮಿಕೊಂಡಿದ್ದು ಬಹಳಷ್ಟು ಸಂತೋಷದ ವಿಷಯವಾಗಿದ್ದು ಇಂತಹ ಕಾರ್ಯಕ್ರಮದಿಂದ ಹಿಂದೂ ಮುಸ್ಲಿಂ ಬಂದವರ ಏಕತೆಯನ್ನು ಒಗ್ಗಟ್ಟು ಉಳಿಸುತ್ತದೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಬುಶೆಟ್ಟಿ, ಮಾತನಾಡಿದರು
ಕಾರ್ಯಕ್ರಮದಲ್ಲಿ ತಾಲೂಕ ಅರೋಗ್ಯ ಅಧಿಕಾರಿ ಡಾ ಮಹಮ್ಮದ್ ಗಫರ್,ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ತಾಲೂಕ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ರೇವಣಸಿದ ದಾದಾಪುರ, ವಿಜಯ್ಕುಮಾರ ಬೆಳಕೇರಿ, ಚಂದ್ರಶೇಖರ್ ಪರ, ಮುಸ್ಲಿಂ ಸಮಾಜದ ಮುಖಂಡರಾದ ಮತಿನ ಸೌದಾಗರ್, ಸೈಯದ್ ಶಬ್ಬೀರ್ , ಅಬ್ದುಲ್ ಹಮೀದ್ ಸಾಬ್, ಸೈಯದ್ ಜಾಕಿರ್ , ಕಲಿಲ ಪಟೇಲ್ , ಮಹಮ್ಮದ್ ನಯುಂ ಪಟೇಲ್,ಮುಸ್ತಫಾ ನನ್, ಇಸ್ಮಾಯಿಲ್ , ಮತ್ತು ಅನೇಕ ಮಡಿನ ಮಸ್ಜಿದ್ ಕಮಿಟಿಯ ಸದಸ್ಯರು ಭಾಗಿಯಾಗಿದ್ದರು