ಅದ್ದೂರಿಯಾಗಿ ನಡೆದ ಚಿನ್ನದ ರಥ ಉತ್ಸವ
ಕೆಜಿಎಫ್: ಏ೩: ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ಅಂತಿಮ ದಿನದಂದು ಕಳೆದ ೫ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಚಿನ್ನದ ಪಲ್ಲಕ್ಕಿ ರಥೋತ್ಸವವು ನಡೆಯುವುದೆ ಇಲ್ಲವೇ ಎಂದು ಸಾರ್ವಜನಿಕರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು ಆದರೆ ಯಾವುದೆ ಅಡ್ಡಿಆತಂಕಗಳು ಇಲ್ಲದೆ ಮಾಜಿ ಶಾಸಕ ವೈ,ಸಂಪಂಗಿ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತ್ತು.
ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದಲ್ಲಿ ಎಲ್ಲಾ ಸಮುದಾಯಗಳಿಗೂ ಉತ್ಸವ ನಡೆಸಲು ಅವಕಾಶವಿದ್ದು
ದಲಿತ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಪಲ್ಲಕ್ಕಿ ಇಲ್ಲದಿರುವುದು ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ದಲಿತರಿಗೆ ಬೇಸರ ಮೂಡಿರುವುದರಿಂದ ಸರ್ಕಾರ ದಲಿತ ಸಮುದಾಯವು ಬ್ರಹ್ಮರಥೋತ್ಸವದಲ್ಲಿ ಪಲ್ಲಕಿಯನ್ನು ಮಾಡಲು ಅವಕಾಶ ಕಲ್ಪಿಸಬೇಕು ಎಂದ ಸರ್ಕಾರಕ್ಕೆ ಅಂದು ಶಾಸಕರಾಗಿದ್ದ ಸಂಪಂಗಿ ನೇತೃತ್ವದಲ್ಲಿ ದಲಿತ ಸಮುದಾಯವು ಮನವಿ ಸಲ್ಲಿಸಿದ್ದರು ಶಾಸಕರ ಮನವಿಯನ್ನು ಗಂಭೀರವಾಗಿ ಪರಿಗಣಿದ ಸರ್ಕಾರವು ಬ್ರಹ್ಮರಥೋತ್ಸವದ ಅಂತಿಮ ದಿನದಂದು ಉತ್ಸವ ನಡೆಸಲು ಅನುಮತಿ ನೀಡಿತ್ತು ಅಂದಿನಿಂದ ಪ್ರತಿ ವರ್ಷವು ಅದ್ದೂರಿಯಾಗಿ ಚಿನ್ನದ ರಥಥೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಆದರೆ ಈ ಬಾರಿ ವಕೀಲ ರೂಪೇಶಕುಮಾರ ಎಂಬುವರು ಉಚ್ಚನ್ಯಾಯಾಲಯದಲ್ಲಿ ಹಿಂದು ಧಾರ್ಮಿಕ ಪದ್ದತಿಯಂತೆ ೯ ದಿನಗಳು ಉತ್ಸವಗಳು ನಡೆಯತಕ್ಕದ್ದು ಆದರೆ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಆಗಮಿಕರ ಸಲಹೆಯನ್ನು ಪರಿಗಣಿಸದೆ ಚಿನ್ನದ ರಥಥೋತ್ಸವ ನಡೆಸಲು ಅನುಮತಿ ನೀಡಿರುವುದು ತಪ್ಪು ಎಂದು ದಾವೆ ಹೊಡಿದ್ದರು ನ್ಯಾಯಾಲಯದ ಮುಂದೆ ಮುಜರಾಯಿ ಇಲಾಖೆ ಆಗಮಿಕ ಪಂಡಿತರು ಕಡೆ ದಿನದಂದು ನಡೆಯು ಬ್ರಹ್ಮರಥೋತ್ಸವ ಅಲ್ಲ ಆದು ಕೇವಲ ನಿತ್ಯೋತ್ಸವವಾಗಿ ಆಚರಣೆ ಮಾಡಲಾಗುವುದು ಎಂದು ಸ್ಪಷ್ಠಕರಣ ನೀಡಿದರು ಈ ವಿಚಾರವು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು ಮತ್ತು ಚಿನ್ನದ ರಥವು ರದ್ದುಗೊಂಡಿದೆ ಎಂಬ ಅಪಪ್ರಚಾರ ಸಹ ಸಾರ್ವಜನಿಕ ವಲಯದಲ್ಲಿ ಹಬ್ಬಿತ್ತು ಆದರೆ ಮಾಜಿ ಶಾಸಕ ವೈ.ಸಂಪಂಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜಾತ್ರೆಯ ಸಿದ್ದತೆಯಲ್ಲಿ ತೊಡಗಿದ್ದರು ಮತ್ತು ಎಂದಿನಂತೆ ಚಿನ್ನದ ರಥ ಉತ್ಸವದಲ್ಲಿ ೩ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಗೊಳಿಸಲಾಗಿತ್ತು ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವರ ಪಲ್ಲಕಿಯು ಮಲ್ಲಿಗೆ ಹೂವಿನಿಂದ ಅಂಲಕರದಿಂದ ಸಿಂಗರಿಸಿದ್ದರು .ಈವೇಳೆ ವೆಂಕಟರಮಣಸ್ವಾಮಿ ಗೆ ವಿಶೇಷ ಅಭಿಷೇಕವನ್ನು ನಡೆಸಲಾತಿತ್ತು ಮತ್ತು ಅನ್ನದಾನವನ್ನು ಎರ್ಪಡಿಸಲಾಗಿತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆದವು ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಸುರೇಶ್‌ಬಾಬು,ಗ್ರಾಮಾಂತರ ಬಿಜೆಪಿ ಅದ್ಯಕ್ಷ ಲಕ್ಷ್ಮಿನಾರಾಯಣ ಮುಖಂಡರಾದವಾದ ಜೈಕುಮಾರ,ಮಾಜಿ ನಗರಸಭೆ ಸದಸ್ಯ ಮೇಘನಾಥನ್ ರವಿಕುಮಾರ ಹಾಗೂ ಇತರರು ಹಾಜರಿದ್ದರು .